ಕಾರ್ಕಳ: ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ನೀರು ನಿಂತಿದ್ದ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 13ರಂದು ನಡೆದಿದೆ.

ಸುಮಂತ್ನ ಮೊಬೈಲ್ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್ ಕೊಡಿಸುವಂತೆ ಅಮ್ಮನಲ್ಲಿ ದುಂಬಾಲು ಬಿದ್ದಿದ್ದನು. ಕೆಲ ತಿಂಗಳು ಕಳೆದ ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಸುರೇಖಾ ಭರವಸೆ ನೀಡಿದ್ದಾಗ್ಯೂ ಆತ ಮನೆಬಿಟ್ಟು ತೆರಳಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಸುಮಂತ್ ಅವರಿಗೆ ಏಕೈಕ ಮಗನಾಗಿದ್ದನು.
