ಕಾಪು: ದಾಂಪತ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಕೌನ್ಸಿಲಿಂಗ್ಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕೌನ್ಸಿಲರ್ನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಮೂಲೂರಿನ ಕಂಕಣಗುತ್ತಿನಲ್ಲಿರುವ ಸುನಂದಾ ವೆಲ್ನೆಸ್ ಸೆಂಟರ್ನಲ್ಲಿ ಘಟನೆ ನಡೆದಿದ್ದು, ಕೌನ್ಸಿಲರ್ ನಿರಂಜನ ಶೇಖರ ಶೆಟ್ಟಿ, ಕೌನ್ಸಿಲಿಂಗ್ ವೇಳೆ ಸಂತ್ರಸ್ತ ಮಹಿಳೆಯನ್ನು ದೈಹಿಕವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆಂಬ ದೂರು ದಾಖಲಾಯಿತು.
ಡಾ. ಹರ್ಷ ಪ್ರಿಯಂವದಾ ಐಪಿಎಸ್ ಮತ್ತು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಶುಭಕರ ನೇತೃತ್ವದ ತಂಡ ಆರೋಪಿ ಶೆಟ್ಟಿಯನ್ನು ನವೆಂಬರ್ 15ರಂದು ಸಂಜೆ ದಸ್ತಗಿರಿ ಮಾಡಿದೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
