ಉಡುಪಿ: ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯದ ಮ್ಯಾರಥಾನ್ 8 ನೇ ಆವೃತ್ತಿಯು 2026 ರ ಫೆ. 8 ರಂದು ನಡೆಯಲಿದೆ. ಈ ಬಾರಿ ಮೈಲ್ಸ್ ಫಾರ್ ಎ ಗ್ರೀನರ್ ಟುಮಾರೋ ಎಂಬ ಥೀಮ್ ನಡಿ ರನ್ ಫಾರ್ ಎ ಸಸ್ಟೆನೇಬಲ್ ಪ್ಯೂಚರ್ಎಂಬ ಟ್ಯಾಗ್ಲೈನ್ನೊಂದಿಗೆ ಮ್ಯಾರಾಥಾನ್ ಜರಗಲಿದೆ. ಸುಮಾರು 22 ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿವಿಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ತಿಳಿಸಿದರು.
ಮಣಿಪಾಲ ಮಾಹೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ವಿದೇಶಗಳ ಅಥ್ಲೆಟಿಕ್ ಗಳು ಭಾಗವಹಿಸಲಿದ್ದು, ದೈಹಿಕ ಹಾಗೂ ದೃಷ್ಟಿ ವಿಕಲಚೇತನರಿಗೆ ವಿಶೇಷ ವಿಭಾಗಗಳ ಓಟವೂ ಇರಲಿದೆ ಎಂದರು.
ಕುಲಪತಿ ಡಾ. ಎಂ.ಡಿ. ವೆಂಕಟೇಶ್ ಮಾತನಾಡಿ, ಮಾಹೆ ವಿವಿ ಹಸುರು ಸುಸ್ಥಿರ ಅಭಿವೃದ್ಧಿಯ ಬದ್ಧತೆಯ ಭಾಗವಾಗಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಿಸ ಲಾಗುತ್ತದೆ. ಮ್ಯಾರಥಾನ್ಗೆ ಪೂರ್ವಭಾವಿಯಾಗಿ ಜ.25ಕ್ಕೆ ಬೆಂಗಳೂರಿನ ಮಾಹೆ ವಿವಿ ಕ್ಯಾಂಪಸ್ ನಿಂದ21 ಕಿ.ಮೀ.ಅರ್ಧ ಮ್ಯಾರಾಥಾನ್ ನಡೆಯಲಿದೆ ಎಂದರು.
ಸಹ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ಈ ಬಾರಿಯ ವಿಶೇಷ ಎಂದರೆ 10 ಕಿ.ಮೀ. ಓಟ. ಮಾಹೆ ನಡೆಸುತ್ತಿರುವ ಮಣಿಪಾಲ ಹಾಸ್ಪಸ್ ರೆಸ್ಪೆಟ್ ಸೆಂಟರ್(ಎಂಎಚ್ ಆರ್ಸಿ) ಯನ್ನು ನೋಡಲು ಅನುಕೂಲ ಆಗುವಂತೆ ಈ ಓಟವನ್ನು ನಿಗದಿ ಮಾಡಲಾಗಿದೆ ಎಂದರು. ಸಹ ಕುಲಪತಿ ಡಾ। ನಾರಾಯಣ ಸಭಾಹಿತ್, ಸಿಒಒ ಡಾ। ಆನಂದ್ ವೇಣುಗೋಪಾಲ್, ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 25 ಲಕ್ಷರೂ.ಗಳವರೆಗೂ ಬಹುಮಾನವಿದ್ದು, ಪ್ರತಿ ವಿಭಾಗದಲ್ಲೂ ನಗದು ಬಹುಮಾನ ಇದೆ. ಓಟದ ಜತೆಗೆ ಗ್ರೀನ್ಸ್ನಲ್ಲಿ ಹಬ್ಬದ ವಾತಾವರಣ ಇರಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಗಳು ನಡೆಯಲಿವೆ.
ಮಣಿಪಾಲ ಮ್ಯಾರಥಾನ್ 8ನೇ ಆವೃತ್ತಿಯು ಫೆ.8 ರಬೆಳಗ್ಗೆ5 ಕೈಕೆಎಂಸಿ ಗ್ರೀನ್ಸ್ ನಿಂದ ಆರಂಭವಾಗಲಿದೆ. ಮೊದಲಿಗೆ 42 ಕಿ.ಮೀ. ಪೂರ್ಣ ಮ್ಯಾರಥಾನ್ ಓಟ, ಅನಂತರ 5.30ಕ್ಕೆ ಹಾಫ್ ಮ್ಯಾರಥಾನ್ ಓಟ, ಕ್ರಮವಾಗಿ 10 ಕಿ.ಮೀ., 5 ಕಿ.ಮೀ, 3 ಕಿ.ಮೀ. ಫನ್ ರನ್ ಇರಲಿದೆ. 42 ಕಿ.ಮೀ. ಮ್ಯಾರಥಾನ್ ಗ್ರೀನ್ಸ್ನಿಂದ ಆರಂಭಗೊಂಡು, ಪೆರಂಪಳ್ಳಿ ದೊಡ್ಡಣಗುಡ್ಡೆ ಸಂತೆಕಟ್ಟೆ ಕೆಮ್ಮಣ್ಣು, ಹೂಡೆ, ಮಲ್ಪೆ ಬೀಚ್, ಕಲ್ಮಾಡಿ, ಉದ್ಯಾವರ, ಕಿನ್ನಿಮೂಲ್ಕಿ, ಉಡುಪಿ, ಕಲ್ಸಂಕ ಮಾರ್ಗವಾಗಿ ಮಣಿಪಾಲಕ್ಕೆ ಬರಲಿದೆ. ಮ್ಯಾರಥಾನ್ನ ಎಲ್ಲ ಮಾರ್ಗವೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ ಎನ್ನುತ್ತಾರೆ ಮಾಹೆ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್.
