ಕುಂದಾಪುರ: ಕೋಡಿಯ ಹಳವಳ್ಳಿ ಬೀಚ್ ಬಳಿಯ ಹೋಮ್ ಸ್ಟೇ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯೋರ್ವರಿಗೆ ಕಾರು ಢಿಕ್ಕಿಯಾಗಿ, ಗಾಯಗೊಂಡ ಘಟನೆ ಜ.24ರ ಸಂಜೆ 6 ಗಂಟೆಯ ಸುಮಾರಿಗೆ ಸಂಭವಿಸಿದೆ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಣ್ಣಪ್ಪ ಪೂಜಾರಿಯವರಿಗೆ ಕಾರ್ತಿಕ್ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಢಿಕ್ಕಿಯಾಗಿದೆ.
ಗಾಯಗೊಂಡ ಅಣ್ಣಪ್ಪ ಅವರನ್ನು ಕಾರಿನಲ್ಲಿದ್ದ ಪ್ರಕಾಶ ದುರ್ಗಪ್ಪ ನಾಯ್ಕ ಹಾಗೂ ಸಂತೋಷ್ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
