ಉಡುಪಿ : ಕಳೆದ ರಾತ್ರಿ ಅಂಬಾಗಿಲು- ಪೆರಂಪಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಿಟಿಬಸ್ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತ ಬಸ್ ಚಾಲಕನನ್ನು ಬಸ್ ಚಾಲಕ ಸಂದೀಪ್ ಎಂದು ಗುರುತಿಸಲಾಗಿದೆ.
ಮೂಲತಃ ಸಾಗರ ತಾಲೂಕಿನವರಾದ ಸಂದೀಪ್ ಅವಿವಾಹಿತರಾಗಿದ್ದು,ಉಡುಪಿ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದರು ಎಂದು ತಿಳಿದು ಬಂದಿದೆ

