ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಮನೋರೋಗಿ ವ್ಯಕ್ತಿಯನ್ನು ವಿಶುಶೆಟ್ಟಿಯವರು ರಕ್ಷಿಸಿ ಮಾನಸಿಕ ಚಿಕಿತ್ಸೆಗೆ ದಾಖಲಿಸಿದ್ದಾರೆ.
ವ್ಯಕ್ತಿ ಕಲ್ಕತ್ತಾ ಮೂಲದ ಬಿಂದನ್ (45 ವರ್ಷ) ಎಂಬಷ್ಟೆ ಮಾಹಿತಿ ಲಬಿಸಿದ್ದು, ಸಾರ್ವಜನಿಕ ವಲಯ ಹಾಗೂ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ.
ಈ ಬಗ್ಗೆ ಪೋಲಿಸರು ವಿಶುಶೆಟ್ಟಿಯವರಿಗೆ ಮಾಹಿತಿ ಕರೆ ಮಾಡಿದ್ದು ಕರೆಗೆ ಸ್ಪಂದಿಸಿದ ವಿಶುಶೆಟ್ಟಿಯವರು ರಕ್ಷಣೆ ಮಾಡಿದ್ದಾರೆ.
ಸಂಬಂಧಪಟ್ಟವರು ಯಾರಾದರು ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.

