ಮಲೆನಾಡು ಮತ್ತು ಕರಾವಳಿಯನ್ನು ಜೋಡಿಸುವ ಕೊಂಡಿ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟಿಯಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ. ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಭೂ ಕುಸಿತ ಉಂಟಾಗಿ 3 ಜನ ಕಾರ್ಮಿಕರು ಸಾವನಿಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನ್ ಇಂದು ನಡೆದಿದೆ.

ಹುಲಿಕಲ್ ಘಾಟಿಯಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಘನ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇಂದು ಕಾಮಗಾರಿ ನಡೆಸುವ ವೇಳೆ ಏಕಾ ಏಕಿ ಭೂ ಕುಸಿತ ಸಂಭವಿಸಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಸದ್ಯಕ್ಕೆ ಹುಲಿಕಲ್ ಘಾಟಿಯಲ್ಲಿ ಭೂ ಕುಸಿತ ಮುಂದಿವರೆದಿದ್ದು, ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

