ಉಡುಪಿ : ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವತಿನ್ನು, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಸುಲೇಮಾನ್ ಬ್ರಹ್ಮ ಕುಮಾರಿ ಎನ್ನುವರ ಸಹಕಾರದಿಂದ ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.
ಬಳಿಕ ಯುವತಿನ್ನು ಮಹಿಳಾ ಪೋಲಿಸರು ನಿಟ್ಟೂರಿನ ಸಖಿ ಸೆಂಟರಿನಲ್ಲಿ ದಾಖಲುಪಡಿಸಿದ್ದಾರೆ.
ಯುವತಿಯನ್ನು ಗದಗ ಜಿಲ್ಲೆಯ ಲಕ್ಷೀಶ್ವರದ ಅಕ್ಷತಾ ಅಂಗಡಿ,(24ವ)ತಂದೆ ವಿರುಪಾಕ್ಷಪ್ಪ ಎಂದು ಗುರುತಿಸಲಾಗಿದೆ.
ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ನಗರ ಮಹಿಳಾ ಪೋಲಿಸ್ ಠಾಣೆ ಅಥವಾ ಸಖಿ ಸೆಂಟರ್ ಸಂಪರ್ಕಿಸಲು ಸೂಚಿಸಲಾಗಿದೆ.

