ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಮತಗಳ ಕೌಂಟಿಂಗ್ ಭರದಿಂದ ಸಾಗುತ್ತಿದೆ. ಭಾರೀ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ದೀದಿ- ಮೋದಿ ಫೈಟ್ ನಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ.
ಇನ್ನೊಂದು ಅಚ್ಚರಿಯ ಫಲಿತಾಂಶದಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಭಾರೀ ಕಮಾಲ್ ಮಾಡಿದ್ದು, ಸ್ಟಾಲಿನ್ ನೇತೃತ್ವದ ಡಿ ಎಂ ಕೆ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ.
ಅಸ್ಸಾಂ ನಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಮೂರನೇ ಭಾರಿಗೆ ಸರ್ಕಾರ ರಚನೆಗೆ ಸಿದ್ಧವಾಗಿದೆ.
ಕೇರಳದಲ್ಲಿ ಆಡಳಿತ ವಿರೋಧಿ ಅಲೆಗೆ ಪಿಣರಾಯಿ ವಿಜಯನ್ ಪಕ್ಷ ಕೊಚ್ಚಿ ಹೋಗಿದ್ದು, ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಭಾರೀ ಮುನ್ನಡೆ ಸಾಧಿಸಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತ್ತೊಮ್ಮೆ NDA ಮುನ್ನಡೆ ಸಾಧಿಸಿದೆ.
LIVE UPDATES :
ಪಶ್ಚಿಮ ಬಂಗಾಳದಲ್ಲಿ 180 ರ ಗಡಿ ದಾಟಿದ ಬಿಜೆಪಿ
ತಮಿಳುನಾಡಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಕಮಾಲ್! ಸರಳ ಬಹುಮತದತ್ತ ದಾಪುಗಾಲು
ಕರ್ನಾಟಕದ ಉಪ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ
ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಹಿನ್ನಡೆ
ಮಮತಾ ಬ್ಯಾನರ್ಜಿ ಸಂಪುಟದ 31 ಕ್ಕೂ ಹೆಚ್ಚು ಸಚಿವರಿಗೆ ಭಾರೀ ಹಿನ್ನಡೆ
ಕೇರಳದಲ್ಲಿ ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್
ದಾವಣಗೆರೆಯಲ್ಲಿ ಮುನ್ನಡೆಗೆ ಬಂದ ಕಾಂಗ್ರೆಸ್, 9 ನೇ ಸುತ್ತಿನಲ್ಲಿ ಕಾಂಗ್ರೆಸ್ ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ

