ಮಂಗಳೂರು : ಲೋಲಿಟ್ಟ ಹಾಗೂ ಅವರ ಕುಟುಂಬದವರು ಮಲ್ಲಿಕಟ್ಟೆಯಿಂದ ಮೇರಿ ಹಿಲ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ,
ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟಿದ್ದರು.
ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣವೇ, ಠಾಣೆಯ ಸಿಬ್ಬಂದಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ,
ಆಟೋ ರಿಕ್ಷಾ ಚಾಲಕ ರೋಷನ್ ಅವರ ಪ್ರಾಮಾಣಿಕ ಸಹಕಾರದಿಂದ
ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಪತ್ತೆಹಚ್ಚಿ, ಪೊಲೀಸ್ ಉಪ ನಿರೀಕ್ಷಕರ ಸಮ್ಮುಖದಲ್ಲಿ
ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ಪ್ರಾಮಾಣಿಕ ಆಟೋ ಚಾಲಕ ರೋಷನ್ ಅವರಿಗೆ ಹಾಗೂ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


