ಕೆಲವರ ಏನೇ ತಿಂದ್ರು ದಪ್ಪ ಆಗೋದೆ ಇಲ್ಲ. ಆದ್ರೆ ಇನ್ನೂ ಕೆಲವರು ಸ್ವಲ್ಪ ತಿಂದರೂ ಸಾಕು ಬೇಗ ದಪ್ಪ ಆಗ್ತಾರೆ. ಅಂಥವರು ಸದಾ ದೇಹದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಿರುತ್ತಾರೆ. ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸೋದು ಸುಲಭದ ಮಾತಲ್ಲ. ಅದೇ ಕಾರಣದಿಂದ ಹಲವರು ಜಿಮ್, ಯೋಗ, ವ್ಯಾಯಾಮ, ಡಯೆಟ್ ಅಂತ ಏನೇನೋ ಸಾಹಸ ಮಾಡುತ್ತಾರೆ.
ಆದರೆ ಹೊಟ್ಟೆಯ ಸುತ್ತ ತುಂಬಿರುವ ಕೊಬ್ಬನ್ನು ಕರಗಿಸಲು ಹಲವು ಟಿಪ್ಸ್ ಇದೆ. ಕೆಲವು ದಿನಗಳವರೆಗೆ ಆ ಟಿಪ್ಸ್ ಫಾಲೋ ಮಾಡಿದ್ರೆ, ತಕ್ಷಣ ಕೊಬ್ಬು ಕರಗುತ್ತೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಆ ಟಿಪ್ಸ್ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ತೂಕ ನಿಯಂತ್ರಿಸಲು ಸಹಾಯವಾಗುವ ವಸ್ತುಗಳಲ್ಲಿ ನಿಂಬೆ ಹಣ್ಣು ಕೂಡಾ ಒಂದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸದೊಂದಿಗೆ ಬೆರೆಸಿದ ಬಿಸಿ ನೀರು ಕುಡಿದರೆ ತೂಕ ಕಡಿಮೆಯಾಗಲಿ ಸಹಾಯವಾಗುತ್ತೆ ಎಂದು ತಜ್ಞರು ಹೇಳುತ್ತಾರೆ.
ನಿಂಬೆಹಣ್ಣು ಉತ್ಕರ್ಷಣಾ ನಿರೋಧಕಗಳು ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳನ್ನು ಹೊಂಇದೆ. ಇವು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಇದೀಗ ನೋಯ್ಡಾದ ಡಯೆಟ್ ಮಂತ್ರದ ಸಂಸ್ಥಾಪಕಿ ಮತ್ತು ಹಿರಿಯ ಆಹಾರ ತಜ್ಞೆ ಕಾಮಿನಿ ಸಿನ್ಹಾ ಅವರು ಹೇಳುವಂತೆ, ದಿನನಿತ್ಯ ಬೆಳಿಗ್ಗೆ ಅರ್ಧ ನಿಂಬೆ ರಸದೊಂದಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದರಿಂದ, ಹೊಟ್ಟೆಯಲ್ಲಿರುವ ಕೊಬ್ಬು ತಕ್ಷಣ ಕರಗುತ್ತದೆ ಎನ್ನಲಾಗಿದೆ.
ಬೇಸಿಗೆಯಾಗಿರಲಿ, ಚಳಿಗಾಲವಾಗಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ. ಅಲ್ಲದೇ ನೀವು ನಿಂಬೆ ಜ್ಯೂಸ್ ಕುಡಿಯುವುದರಿಂದಲೂ ತೂಕ ಇಳಿಸಿಕೊಳ್ಳಬಹುದು. ಅಲ್ಲಿ ಸಕ್ಕರೆ ಬದಲಿಗೆ ಜೇನು ತುಪ್ಪ ಬಳಸಿದರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ನಿಂಬೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಉತ್ಪನ್ನಗಳನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಆದರೆ ನಿಂಬೆ ನೀರನ್ನು ಕುಡಿಯುವುದರಿಂದ ಮಾತ್ರ ತೂಕ ಇಳಿಕೆಯಾಗುವುದಿಲ್ಲ ಅಥವಾ ಹೊಟ್ಟೆಯ ಕೊಬ್ಬು ಸಂಪೂರ್ಣವಾಗಿ ಕರಗುವುದಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ಉತ್ತಮ ಡಯಟ್, ನಿಯಮಿತ ವ್ಯಾಯಾಮ ಕೂಡಾ ಅತ್ಯಗತ್ಯವಾಗಿದೆ.

