ಉಡುಪಿ: ಕರಾವಳಿ ಭಾಗದಲ್ಲಿ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ನ ಹೊಸ ಭವ್ಯ ಶೋರೂಮ್ ಜುಲೈ 4ರಂದು (ಶನಿವಾರ) ಬೆಳಿಗ್ಗೆ 10 ಗಂಟೆಗೆ ಉಡುಪಿಯ ಕುಂಜಿಬೆಟ್ಟು–ಕಡಿಯಾಳಿ ಪ್ರದೇಶದಲ್ಲಿ ಶುಭಾರಂಭಗೊಳ್ಳಲಿದೆ.
ವಿ.ಕೆ. ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ವಿ.ಕೆ. ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಕಳೆದ 15 ವರ್ಷಗಳಿಂದ ಕರಾವಳಿ ಜನತೆಗೆ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಒದಗಿಸುತ್ತಾ ಬಂದಿದೆ. ಆಧುನಿಕ ಮರದ ಮತ್ತು ಮೆಟಲ್ ಫರ್ನಿಚರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ ಮಂಗಳೂರಿನಲ್ಲಿ ಈಗಾಗಲೇ ಐದು ಶಾಖೆಗಳನ್ನು ಹೊಂದಿದ್ದು, ಇದೀಗ ಆರನೇ ಶಾಖೆಯಾಗಿ ಉಡುಪಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.

ಶುಭಾರಂಭ ಸಮಾರಂಭಕ್ಕೆ ಉಡುಪಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಉಡುಪಿ ವಿಧಾನಸಭಾ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಸೇರಿದಂತೆ ಅನೇಕ ಗಣ್ಯರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಪ್ರಯುಕ್ತ ಸಂಸ್ಥೆಯು ಗ್ರಾಹಕರಿಗಾಗಿ “ವಿಸಿಟ್ & ವಿನ್” ಅಭಿಯಾನವನ್ನು ಘೋಷಿಸಿದೆ. ಈ ಯೋಜನೆಯಡಿ ಶೋರೂಮ್ಗೆ ಭೇಟಿ ನೀಡುವ ಗ್ರಾಹಕರಿಗೆ ಕಾಶ್ಮೀರ ಪ್ರವಾಸ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಶೋರೂಮ್ನಲ್ಲಿ ಮನೆ ಮತ್ತು ಕಚೇರಿಗೆ ಬೇಕಾದ ಫರ್ನಿಚರ್, ಹೋಮ್ ಇಂಟೀರಿಯರ್ ಮತ್ತು ಡೆಕೋರೇಷನ್ ಉತ್ಪನ್ನಗಳು, ಟೆಲಿವಿಷನ್, ಫ್ರಿಡ್ಜ್, ವಾಶಿಂಗ್ ಮೆಷಿನ್, ಏರ್ ಕಂಡೀಷನರ್, ಕಿಚನ್ ಅಪ್ಲಯನ್ಸಸ್, ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳಂತಹ ಹಲವು ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರಲಿವೆ.
ಲಕ್ಸುರಿ ಸೋಫಾ ಸೆಟ್ಗಳು, ಡೈನಿಂಗ್ ಸೆಟ್ಗಳು, ಬೆಡ್ರೂಮ್ ಸೆಟ್ಗಳು, ವಾರ್ಡ್ರೋಬ್ಗಳು ಸೇರಿದಂತೆ ವೈವಿಧ್ಯಮಯ ಪೀಠೋಪಕರಣಗಳ ಜೊತೆಗೆ ಮೊಡ್ಯುಲರ್ ಕಿಚನ್, ಕಚೇರಿ ಫರ್ನಿಚರ್ ಹಾಗೂ ಡ್ಯೂರೊಫ್ಲೆಕ್ಸ್ ಮ್ಯಾಟ್ರೆಸ್ಗಳೂ ಲಭ್ಯವಿರುತ್ತವೆ ಎಂದು ಸಂಸ್ಥೆ ತಿಳಿಸಿದೆ.
ಮೆಟಲ್ ಫರ್ನಿಚರ್ ತಯಾರಿಕೆಯಲ್ಲಿ ವಿಶೇಷ ಹೆಸರು ಪಡೆದಿರುವ ಸಂಸ್ಥೆ, ದೊಡ್ಡ ಪ್ರಮಾಣದ ಸಗಟು ಆರ್ಡರ್ಗಳನ್ನು ಕಡಿಮೆ ಅವಧಿಯಲ್ಲಿ ಪೂರೈಸುವ ಸಾಮರ್ಥ್ಯವನ್ನೂ ಹೊಂದಿದೆ.
ಈ ಸಂಸ್ಥೆಯ ಶೋರೂಮ್ಗಳು ಈಗಾಗಲೇ ಯೆಯ್ಯಾಡಿ, ತೊಕ್ಕೊಟ್ಟು, ವಾಮಂಜೂರು ಮತ್ತು ಲೇಡಿಹಿಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯ ಹೊಸ ಶಾಖೆ ಮೂಲಕ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.
ಸಂಸ್ಥೆಯ ಪ್ರವರ್ತಕರಾದ ವಿಠ್ಠಲ್ ಕುಲಾಲ್ ಮತ್ತು ವಿನುತಾ ವಿಠ್ಠಲ್ ಕುಲಾಲ್ ಅವರು ಸಾರ್ವಜನಿಕರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಗೂ ಹೊಸ ಶೋರೂಮ್ಗೆ ಭೇಟಿ ನೀಡಲು ಆಹ್ವಾನಿಸಿದ್ದಾರೆ.

