ಪ್ರಸ್ತುತ ದಿನಗಳಲ್ಲಿ ಜನರನ್ನು ಹೆಚ್ಚಾಗಿ ಚಿಂತೆಗೆ ದೂಡುತ್ತಿರುವ ಒಂದು ವಿಚಾರ ಕೊಲೆಸ್ಟ್ರಾಲ್ (ಕೊಬ್ಬು). ದೇಹದಲ್ಲಿನ ಕೊಬ್ಬನ್ನು ಕರಗಿಸಲು ಹಲವರು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ದೇಹದಂಡನೆ, ಆಹಾರ ಕ್ರಮಗಳ ಮೂಲಕ ಕೊಬ್ಬು ಕರಗಿಸಲು ಹೊರ ಸಾಹಸ ಪಡುವವರ ಸಂಖ್ಯೆ ಕಡಿಮೆಯೇನಲ್ಲ.
ಹೀಗೆ ದೇಹದ ಕೊಲೆಸ್ಟ್ರಾಲ್ ಕರಗಿಸಲು ಉಪಯೋಗವಾಗುವಂತಹ ಕೆಲವು ವಸ್ತುಗಳ ಪಟ್ಟಿ ಇಲ್ಲಿದೆ.
ಪ್ರತಿನಿತ್ಯ ಒಂದು ಕಪ್ ಬೇಳೆ ಕಾಲುಗಳನ್ನು ಆಹಾರದಲ್ಲಿ ಬಳಕೆ ಮಾಡುವುದು ಕರುಳಿನಲ್ಲಿ ಕೊಬ್ಬಿನಂಶ ಶೇಖರಣೆಯಾಗುವುದನ್ನು ತಪ್ಪಿಸುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಒಂದು ಹಿಡಿ ಉಪ್ಪು ರಹಿತ ಬೀಜಗಳನ್ನು ಸೇವನೆ ಮಾಡುವುದು ಸಹ ಕೊಬ್ಬು ಶೇಖರಣೆ ತಡೆಯಲು ಮತ್ತು ಶೇಖರಣೆಯಾದ ಕೊಬ್ಬನ್ನು ಕರಗಿಸುವಲ್ಲಿ ಕೆಲಸ ಮಾಡುತ್ತದೆ.
ಫೈಬರ್ ಅಂಶ ಹೆಚ್ಚಾಗಿರುವ ಆಹಾರ ವಸ್ತುಗಳ ಸೇವನೆ ಆರೋಗ್ಯದ ಕಾಳಜಿ ಮಾಡುತ್ತದೆ. ಜೊತೆಗೆ ಕೊಬ್ಬಿನ ಸಮಸ್ಯೆ ನಿವಾರಣೆಗೂ ಸೂಕ್ತ ಪರಿಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿ ಮಾಡುವುದು ಸಹ ದೇಹದ ಕೊಬ್ಬು ನಿವಾರಣೆಗೆ ಮದ್ದಾಗಿದೆ. ಇದು ದೇಹಕ್ಕೆ ಉಲ್ಲಾಸ ತುಂಬುವುದರ ಜೊತೆಗೆ ಮನಸ್ಸಿಗೂ ಹಿತ ನೀಡುತ್ತದೆ. ಆರೋಗ್ಯ ಅಸಮತೋಲನ ತಪ್ಪಿಸುವುದಕ್ಕೂ ವ್ಯಾಯಾಮ ಉತ್ತಮ ಮಾರ್ಗ.
ಸರಿಯಾದ ನಿದ್ದೆಯೂ ದೇಶದಲ್ಲಿ ಕೊಲೆಸ್ಟ್ರಾಲ್ ಅಸಮತೋಲನ ತಪ್ಪಿಸಿ ಆರೋಗ್ಯಯುತ ಜೀವನ ನಡೆಸುವಲ್ಲಿ ಹೆಚ್ಚು ಉಪಯುಕ್ತ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಇಲ್ಲದೇ ಹೋದಲ್ಲಿ ದೇಹಕ್ಕೆ ಆಯಾಸವಾಗುವುದು, ದೇಹದಲ್ಲಿ ಕೊಬ್ಬಿನಂಶ ಶೇಖರಣೆಯಾಗುವುದಕ್ಕೂ ಕಾರಣವಾಗಬಹುದು. ಸರಿಯಾಗಿ ನಿದ್ರಿಸುವುದು ಸಹ ಆರೋಗ್ಯಪೂರ್ಣ ಜೀವನದ ಗುಟ್ಟು ಎನ್ನುವುದು ನಿಸ್ಸಂಶಯ.
ಕೆಲವು ಸರಳ ಪರಿಹಾರಗಳ ಮೂಲಕ, ಯಾವುದೇ ಕೆಮಿಕಲ್ಗಳು ದೇಹಕ್ಕೆ ಹೊಕ್ಕು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದಂತೆ ಕೊಬ್ಬಿನಾಂಶ ಕರಗಿಸಲು ಸಾಧ್ಯವಿದೆ. ಕೆಲವು ಅಭ್ಯಾಸಗಳನ್ನು ನಮ್ಮ ಆಹಾರ ಕ್ರಮ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ರೂಢಿ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.

