ಮನುಷ್ಯರಾದಿಯಾಗಿ ಪ್ರಾಣಿ, ಪಕ್ಷಿಗಳಿಗೆ ಕಣ್ಣು ಅತ್ಯಮೂಲ್ಯ ಅಂಗ. ಕಣ್ಣು ಇಲ್ಲದೇ ಹೋದಲ್ಲಿ ಜೀವನ ಅತ್ಯಂತ ಕಷ್ಟ. ಪ್ರತಿಯೊಂದು ಕೆಲಸಗಳಿಗೂ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿ ಬರುತ್ತದೆ. ನಮ್ಮ ದೇಹದ ಅತಿ ಮುಖ್ಯ ಅಂಗವಾಗಿರುವ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು? ಎಂಬುದನ್ನು ತಿಳಿಯೋಣ.
ಡಿಜಿಟಲ್ ಯುಗದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ದಾಸರು. ಜೊತೆಗೆ ಟಿ.ವಿ., ಕಂಪ್ಯೂಟರ್ಗಳನ್ನು ಅಳತೆ ಮೀರಿ ವೀಕ್ಷಣೆ ಮಾಡುವುದರಿಂದಲೂ ಕಣ್ಣಿಗೆ ಸಮಸ್ಯೆಗಳಾಗಬಹುದು. ದೃಷ್ಟಿ ದೋಷಗಳಂತಹ ಕಣ್ಣಿನ ಸಮಸ್ಯೆಗಳ ಪರಿಹಾರವನ್ನು ಕೆಲವು ಆಹಾರ ವಸ್ತುಗಳನ್ನು ಸೇವನೆ ಮಾಡುವ ಮೂಲಕ ಕಂಡುಕೊಳ್ಳಬಹುದು. ಅಂತಹ ಕೆಲವು ಆಹಾರ ವಸ್ತುಗಳ ಪಟ್ಟಿ ಇಲ್ಲಿದೆ.
ಕಣ್ಣಿನ ದೃಷ್ಟಿ ಸುಧಾರಣೆಗೆ ಕ್ಯಾರೆಟ್, ಗೆಡ್ಡೆ ಗೆಣಸು ಉತ್ತಮ ಆಹಾರ. ಇವುಗಳಲ್ಲಿರುವ ಬಿಟಾ ಕ್ಯಾರಟಿನ್ ಮತ್ತು ವಿಟಮಿನ್ ಎ ಕಣ್ಣಿನ ರೆಟಿನಾವನ್ನು ರಕ್ಷಣೆ ಮಾಡುವುದರ ಜೊತೆಗೆ, ಇರುಳುಗುರುಡುತನ ಬಾರದಂತೆ ತಡೆಯುತ್ತದೆ. ಹಸಿರು ಸೊಪ್ಪುಗಳಲ್ಲಿರುವ ಲ್ಯಾಟಿನ್ ಮತ್ತು ಜೀಸಾಂಥಿನ್ ಎಂಬ ಅಂಶಗಳು ಸೂರ್ಯನ ಅತಿನೇರಳೆ ಕಿರಣಗಳಿಂದ ಕಣ್ಣನ್ನು ರಕ್ಷಣೆ ಮಾಡುತ್ತವೆ. ಹಾಗಾಗಿ ನಮ್ಮ ಆಹಾರದಲ್ಲಿ ಪಾಲಕ್, ದಂಟಿನ ಸೊಪ್ಪು ಸೇರಿದಂತೆ ಇನ್ನಿತರ ಹಸಿರು ಸೊಪ್ಪುಗಳಿಂದ ತಯಾರಿಸಿದ ಖಾಧ್ಯಗಳಿದ್ದರೆ ಉತ್ತಮ.
ವಿಟಮಿನ್ ಸಿ’ ಅಂಶಗಳು ಹೆಚ್ಚಾಗಿರುವ ಮೋಸಂಬಿ, ಕಿತ್ತಳೆ, ನಿಂಬೆ, ನೆಲ್ಲಿಕಾಯಿ ಮೊದಲಾದವುಗಳ ಸೇವನೆ ಕಣ್ಣಿನಲ್ಲಿ ಪೊರೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ವಿಟಾಮಿನ್ ಇ, ಒಮೇಗಾ 3 ಕೊಬ್ಬಿನಾಂಶಗಳು ವಾಲ್ನಟ್, ಬದಾಮ್, ಅಗಸೇಬೀಜ, ಗೋಡಂಬಿ ಹೆಚ್ಚಾಗಿದ್ದು ಇವು ದೃಷ್ಟಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
ಸಾಲ್ಮನ್,ಟ್ಯೂನ್ ಮೀನುಗಳು ಕಣ್ಣಿನ ಆರೋಗ್ಯವೃದ್ಧಿಗೆ ಉತ್ತಮ ಆಹಾರ.

