ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ (ISRO) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಸ್ಥೆಅರ್ಜಿ ಆಹ್ವಾನಿಸಲಾಗಿದೆ.
ಈ ಸಂಬಂಧ ಅಧಿಕೃತ ನೇಮಕಾತಿ ಅಧಿಸೂಚನೆ (ಪ್ರಕಟಣೆ ಸಂಖ್ಯೆ: ISRO:ICRB:01(A-JPA):2026) ಬಿಡುಗಡೆ ಮಾಡಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು 242 ಖಾಲಿ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಅಸಿಸ್ಟೆಂಟ್ (Assistant) ವಿಭಾಗದಲ್ಲಿ 120 ಹುದ್ದೆಗಳು, ಅಪ್ಪರ್ ಡಿವಿಷನ್ ಕ್ಲರ್ಕ್ (UDC) ವಿಭಾಗದಲ್ಲಿ 76 ಹುದ್ದೆಗಳು, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (JPA) ವಿಭಾಗದಲ್ಲಿ 22 ಹುದ್ದೆಗಳು ಹಾಗೂ ಸ್ಟೆನೋಗ್ರಾಫರ್ (Stenographer) ವಿಭಾಗದಲ್ಲಿ 24 ಹುದ್ದೆಗಳು ಖಾಲಿ ಇವೆ.
ಅಸಿಸ್ಟೆಂಟ್ ಮತ್ತು ಯುಡಿಸಿ (UDC) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಇನ್ನು ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಪದವಿ ಜೊತೆಗೆ ನಿಮಿಷಕ್ಕೆ 60 ಪದಗಳ ಇಂಗ್ಲಿಷ್ ಸ್ಟೆನೋಗ್ರಾಫಿ ವೇಗ ಹೊಂದಿರಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳಾಗಿದ್ದು, ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಸಡಲಿಕೆ ಲಭ್ಯವಿರುತ್ತದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ಸಿಪಿಸಿ (7th CPC) ನಿಯಮಗಳ ಪ್ರಕಾರ ಲೆವೆಲ್-4 (Level-4) ಅಡಿಯಲ್ಲಿ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನವೇ (Basic Pay) 25,500 ರೂ. ಇರಲಿದ್ದು, ಇದರೊಂದಿಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಕೇಂದ್ರ ಸರ್ಕಾರದ ಇತರ ಭತ್ಯೆಗಳು ಕೂಡ ದೊರೆಯಲಿವೆ.
ಮೊದಲಿಗೆ ಲಿಖಿತ ಪರೀಕ್ಷೆ (Written Test) ನಡೆಯಲಿದ್ದು, ಅದರಲ್ಲಿ ತೇರ್ಗಡೆಯಾದವರಿಗೆ ಹುದ್ದೆಗೆ ತಕ್ಕಂತೆ ಕೌಶಲ್ಯ ಪರೀಕ್ಷೆ (Typing / Stenography Skill Test) ಇರುತ್ತದೆ. ನಂತರ ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ತಪಾಸಣೆ ನಡೆಸಿ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 16. ಅಭ್ಯರ್ಥಿಗಳು ISRO ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

