ಉಡುಪಿ: ಮೂಡು ಪೆರಂಪಳ್ಳಿಯ ಐತಿಹಾಸಿಕ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನೂತನ ನದಿ ಸ್ನಾನಘಟ್ಟ 2.25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಲೋಕಾರ್ಪಣೆಗೊಂಡಿದೆ.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ದೇವಸ್ಥಾನದ ಪ್ರಮುಖರೊಂದಿಗೆ ಸ್ವರ್ಣ ನದಿಗೆ ಬಾಗಿನ ಸಮರ್ಪಿಸುವ ಮೂಲಕ ನೂತನ ಸ್ನಾನಘಟ್ಟವನ್ನು ಉದ್ಘಾಟಿಸಿದರು.
ನದಿ ಕೊರೆತದಿಂದ ಹಾನಿಗೀಡಾಗಿದ್ದ ಹಳೆಯ ಸ್ನಾನಘಟ್ಟದಿಂದ ಭಕ್ತರಿಗೆ ಎದುರಾಗುತ್ತಿದ್ದ ಸಮಸ್ಯೆ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುದಾನ ಒದಗಿಸಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಪ್ರತಿ ವರ್ಷ ಕೃಷ್ಣಾಂಗಾರಕ ಚತುರ್ದಶಿಯಂದು ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನೂತನ ಸ್ನಾನಘಟ್ಟದಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದರು.

