ಉಡುಪಿ: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಇಂದು ಗುಜರಾತ್ನಲ್ಲಿ ಕೇಂದ್ರ ಸರ್ಕಾರ ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಭಾವಚಿತ್ರವನ್ನು ರಂಗೋಲಿ ಮೂಲಕ ಬಿಡಿಸಿ ಕಲಾವಿದೆ ಗಮನ ಸೆಳೆದಿದ್ದಾರೆ.
ಬಾರಕೂರಿನ ರಂಗೋಲಿ ಕಲಾವಿದೆ ವಿಶಾಲ ಮಹೇಶ್ ಪೂಜಾರಿ ಅವರು ಅನಂತ್ ನಾಗ್ ಅವರ ಸುಂದರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿದ್ದಾರೆ.
ಅನಂತ್ ನಾಗ್ ಅವರ ಅಭಿನಯ ಜೀವನ ಮತ್ತು ಸಾಧನೆಗೆ ಗೌರವ ಸೂಚಿಸುವ ರೀತಿಯಲ್ಲಿ ಮೂಡಿಬಂದಿರುವ ಈ ಕಲಾಕೃತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿದೆ.
ರಂಗೋಲಿಯಲ್ಲಿ ಮೂಡಿಬಂದಿರುವ ಅನಂತ್ ನಾಗ್ ಅವರ ಚಿತ್ರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

