ಸೋಪ್, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ಸೌಂದರ್ಯ ಮತ್ತು ವೈಯಕ್ತಿಕ ಬಳಕೆಯ ಉತ್ಪನ್ನಗಳಿಗೂ ಇನ್ಮುಂದೆ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಗುರುತು ನೀಡುವಂತೆ ಕೇಂದ್ರ ಸರ್ಕಾರದ ನಿಯಮ ಜಾರಿಗೆ ಬಂದಿದೆ.
ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು ಬಣ್ಣದ ಚೌಕದೊಳಗೆ ಹಸಿರು ವೃತ್ತ, ಮಾಂಸಾಹಾರಿ ಅಂಶ ಹೊಂದಿರುವ ಉತ್ಪನ್ನಗಳಿಗೆ ಕೆಂಪು ಚೌಕದೊಳಗೆ ಕೆಂಪು ವೃತ್ತ ಗುರುತು ಇರಲಿದೆ.
ಗ್ರಾಹಕರು ಉತ್ಪನ್ನ ಖರೀದಿಸುವಾಗ ಅದರಲ್ಲಿರುವ ಅಂಶಗಳನ್ನು ಸುಲಭವಾಗಿ ಗುರುತಿಸಲು ಈ ಲೇಬಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸೋಪ್, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ವಿವಿಧ ವೈಯಕ್ತಿಕ ಬಳಕೆಯ ಉತ್ಪನ್ನಗಳ ಮೇಲೂ ಈ ಗುರುತು ಕಾಣಿಸಿಕೊಳ್ಳಲಿದೆ

