ಮುಂಬೈ–ತಿರುವನಂತಪುರಂ ಹಾಗೂ ಮುಂಬೈ–ಸಾವಂತವಾಡಿ ನಡುವೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ದೀಪಾವಳಿ ಹಾಗೂ ಪೂಜಾ ಹಬ್ಬದ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಣೆಗೆ ಈ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ.
ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ನಿಂದ ತಿರುವನಂತಪುರಂ ನಾರ್ತ್ಗೆ ವಾರದ ವಿಶೇಷ ರೈಲು ಅಕ್ಟೋಬರ್ 15ರಿಂದ ನವೆಂಬರ್ 19ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ. ಈ ರೈಲು ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಕುಮಟಾ, ಕಾರವಾರ ಹಾಗೂ ಮಂಗಳೂರು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಇನ್ನು ಮುಂಬೈ–ಸಾವಂತವಾಡಿ ನಡುವೆ ಅಕ್ಟೋಬರ್ 9ರಿಂದ ನವೆಂಬರ್ 20ರವರೆಗೆ ವಾರದ ವಿಶೇಷ ರೈಲು ಸಂಚರಿಸಲಿದೆ. ಉಡುಪಿ ಭಾಗದ ಪ್ರಯಾಣಿಕರಿಗೆ ಇದು ನೇರವಾಗಿ ಅನ್ವಯಿಸುವುದಿಲ್ಲ.
ಸಾವಂತವಾಡಿ–ಮುಂಬೈ ವಿಶೇಷ ರೈಲು 01180ರ ಟಿಕೆಟ್ ಬುಕ್ಕಿಂಗ್ ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು

