ಉಡುಪಿ: ಜಿಲ್ಲೆಯ ಆಕಾಶದಲ್ಲಿ ಬುಧವಾರ ಮಧ್ಯಾಹ್ನ ಸೂರ್ಯನ ಸುತ್ತ ವೃತ್ತಾಕಾರದ ಪ್ರಕಾಶಮಾನ ವಲಯವೊಂದು ಗೋಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಸೂರ್ಯನ ಸುತ್ತ ದೊಡ್ಡ ವೃತ್ತದಂತೆ ಕಾಣಿಸಿಕೊಂಡ ಈ ಅಪರೂಪದ ದೃಶ್ಯ ಕೆಲಕಾಲ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಸೂರ್ಯನ ಸುತ್ತ ಕಾಣಿಸಿಕೊಳ್ಳುವ ಈ ವೃತ್ತಾಕಾರದ ಬೆಳಕಿನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಎಂದು ಕರೆಯಲಾಗುತ್ತದೆ. ವಾತಾವರಣದ ಮೇಲ್ಭಾಗದಲ್ಲಿರುವ ಸಣ್ಣ ಹಿಮದ ಸ್ಫಟಿಕಗಳ ಮೂಲಕ ಸೂರ್ಯನ ಬೆಳಕು ವಕ್ರೀಭವನಗೊಂಡಾಗ ಇಂತಹ ಪ್ರಕಾಶಮಾನ ವಲಯಗಳು ಉಂಟಾಗುತ್ತವೆ.
ಉಡುಪಿಯ ಆಕಾಶದಲ್ಲಿ ಕಂಡುಬಂದ ಈ ನೈಸರ್ಗಿಕ ವಿದ್ಯಮಾನವನ್ನು ಕಂಡ ಸಾರ್ವಜನಿಕರು ಕುತೂಹಲ ವ್ಯಕ್ತಪಡಿಸಿದರು. ಹಲವರು ತಮ್ಮ ಮೊಬೈಲ್ಗಳಲ್ಲಿ ಅಪರೂಪದ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

