ಉಡುಪಿಯ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ ತನ್ನ ಸೇವಾ ಪಯಣದ 25 ಯಶಸ್ವಿ ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಇದರೊಂದಿಗೆ ಸಂಘವು ತನ್ನದೇ ಆದ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಈ ದ್ವಿ-ಸಂಭ್ರಮದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 24, 2026ರ ಶನಿವಾರದಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಅಂದು ಸಂಜೆ ಗಂಟೆ 4:30ಕ್ಕೆ ಉಡುಪಿಯ ಜೋಡುಕಟ್ಟೆಯಲ್ಲಿರುವ ಆಶ್ರಯ ಟವರ್ಸ್ನ ಪ್ರಥಮ ಮಹಡಿಯಲ್ಲಿರುವ ನೂತನ ಕಚೇರಿ ಕಟ್ಟಡದಲ್ಲಿ ಈ ಮಹತ್ವದ ಸಮಾರಂಭ ನಡೆಯಲಿದೆ. ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಂಘದ ಅಧ್ಯಕ್ಷರು ಹಾಗೂ ಉಡುಪಿಯ ಮಾಜಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಹಕಾರಿಗಳಾದ ಶ್ರೀ ಶಂಭು ಶೆಟ್ಟಿ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.

ಈ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಜ್ವಲ್ ಡೆವಲಪರ್ಸ್ನ ಶ್ರೀ ಪುರುಷೋತ್ತಮ ಶೆಟ್ಟಿ, ನಾರಾಯಣಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಅಮೀನ್, ಉದ್ಯಮಿಗಳಾದ ಶ್ರೀ ಹರಿಯಪ್ಪ ಕೋಟ್ಯಾನ್ ಹಾಗೂ ಶ್ರೀ ಸಾಧು ಸಾಲ್ಯಾನ್, ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ರೀ ಸುಧೀರ್ ಕುಮಾರ್ ಜೆ. ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಜತ ಮಹೋತ್ಸವದ ಅಂಗವಾಗಿ ಅಂದೇ ಸಂಜೆ ಗಂಟೆ 6:00ಕ್ಕೆ ಅದೇ ವೇದಿಕೆಯಲ್ಲಿ ವಜ್ರದಂತ ಕಲಾವಿದೆರ್, ಕುಡ್ಲ ಇವರಿಂದ “ ಕಾಡಗಗ್ಗರ “ ಎಂಬ ವಿಭಿನ್ನ ವಿನ್ಯಾಸದ ಅದ್ಧೂರಿ ತುಳು ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ. ಕೀರ್ತನ್ ಭಂಡಾರಿ ಅವರ ರಚನೆಯ ಈ ನಾಟಕದಲ್ಲಿ ‘ಕಾಂತಾರ’ ಖ್ಯಾತಿಯ ಸ್ವರಾಜ್ ಶೆಟ್ಟಿ ಹಾಗೂ ಶ್ವೇತಾ ಅರೆಹೊಳೆ ಅಭಿನಯಿಸಲಿದ್ದಾರೆ. ರವಿ ಎಂ. ಭಟ್ ಪರ್ಕಾಡಿ ಅವರ ಸಮಗ್ರ ನಿರ್ದೇಶನ ಹಾಗೂ ಸ್ವರಾಜ್ ಶೆಟ್ಟಿ ಅವರ ನಿರ್ದೇಶನದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮವು ರಂಗೇರಲಿದೆ.

ಸಂಘದ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರಂಜಿತಾ ಪ್ರವೀಣ್ ಹಾಗೂ ಸಮಸ್ತ ಸಿಬ್ಬಂದಿ ವರ್ಗವು ಈ ಐತಿಹಾಸಿಕ ಸಮಾರಂಭಕ್ಕೆ ಸಹಕಾರಿ ಬಂಧುಗಳನ್ನು ಮತ್ತು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದೆ.

