Author: Karavali TV

ನವದೆಹಲಿ: ವಾಟ್ಸ್‌ಆಯಪ್‌ನಲ್ಲಿ ಸಂದೇಶ ಕಳುಹಿಸಲು ಇನ್ನು ಮುಂದೆ ಹಣ ಪಾವತಿಸಬೇಕೇ ಎಂಬ ಚರ್ಚೆ ಇದೀಗ ಆರಂಭವಾಗಿದೆ. ಅಕ್ಟೋಬರ್‌ 1ರಿಂದ ಒಂದು ಸಂದೇಶಕ್ಕೆ 14 ಪೈಸೆ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಶುಲ್ಕ ಸಾಮಾನ್ಯವಾಗಿ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ವಾಟ್ಸ್‌ಆಯಪ್ ಬಳಸುವವರಿಗೆ ಅನ್ವಯಿಸುವುದಿಲ್ಲ. ಈ ಬದಲಾವಣೆ ವಾಟ್ಸ್‌ಆಯಪ್‌ನ ವೈಯಕ್ತಿಕ ಬಳಕೆದಾರರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಸಂದೇಶಗಳನ್ನು ಕಳುಹಿಸುವ ವ್ಯವಹಾರಗಳು ಬಳಸುವ WhatsApp Business…

Read More

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ, ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ. ಗ್ರೂಪ್ ಪ್ರಾಯೋಜಕತ್ವದಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್‌ಪೋ–2026 ಅನ್ನು ಅಕ್ಟೋಬರ್ 9ರ ಶುಕ್ರವಾರ ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು. ಕಾಪು…

Read More

ನವದೆಹಲಿ: ವಿಮಾನವನ್ನು ಪತನಗೊಳಿಸುವ ಪ್ರಯತ್ನದ ನಡುವೆಯೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ನೂರಾರು ಮಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಮಾನ ಟೇಕ್‌ಆಫ್ ಆದ ಸುಮಾರು ಎರಡು ಗಂಟೆಗಳ ಬಳಿಕ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ಘರ್ಷಣೆ ನಡೆದಿದೆ. ಓಮನ್‌ ಮೂಲದ ಸಹ ಪೈಲಟ್…

Read More

ಮೇಷಇಂದು ಮೇಷ ರಾಶಿಯವರಿಗೆ ಶುಭ ದಿನವಾಗಿರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಯಿದೆ. ಉದ್ಯಮಿಗಳು ವ್ಯಾಪಾರ ವಿಸ್ತರಣೆಗೆ ಹೊಸ ಹೆಜ್ಜೆ ಇಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದ್ದು, ಕುಟುಂಬ ಮತ್ತು ಸ್ನೇಹಿತರಿಂದಲೂ ಉತ್ತಮ ಬೆಂಬಲ ದೊರೆಯಲಿದೆ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿದ್ದು, ಕುಟುಂಬದವರೊಂದಿಗೆ ಸಂತಸದ ಸಮಯ ಕಳೆಯುವಿರಿ. ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು…

Read More

ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಸ್ಫೋಟದಲ್ಲಿ ಓರ್ವ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದು, ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮನೀಶ್ (30) ಎಂಬುವರ ಮೃತದೇಹ ಪತ್ತೆಯಾಗಿದೆ. ದುರಂತ ಸಂಭವಿಸಿದ ಆರಂಭಿಕ ಹಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕೇವಲ ಕೆಲವರಿಗೆ ಗಾಯಗಳಾಗಿವೆ ಎಂದಷ್ಟೇ ವರದಿಯಾಗಿತ್ತು. ಆದರೆ, ಸ್ಥಳದಲ್ಲಿ ಬೆಂಕಿ ನಂದಿಸಿ ಪರಿಶೀಲನೆ ನಡೆಸಿದಾಗ ಮನೀಶ್…

Read More

ಉಡುಪಿ: ಜಿಲ್ಲೆಯ ಆಕಾಶದಲ್ಲಿ ಬುಧವಾರ ಮಧ್ಯಾಹ್ನ ಸೂರ್ಯನ ಸುತ್ತ ವೃತ್ತಾಕಾರದ ಪ್ರಕಾಶಮಾನ ವಲಯವೊಂದು ಗೋಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಸೂರ್ಯನ ಸುತ್ತ ದೊಡ್ಡ ವೃತ್ತದಂತೆ ಕಾಣಿಸಿಕೊಂಡ ಈ ಅಪರೂಪದ ದೃಶ್ಯ ಕೆಲಕಾಲ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಸೂರ್ಯನ ಸುತ್ತ ಕಾಣಿಸಿಕೊಳ್ಳುವ ಈ ವೃತ್ತಾಕಾರದ ಬೆಳಕಿನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಎಂದು ಕರೆಯಲಾಗುತ್ತದೆ. ವಾತಾವರಣದ ಮೇಲ್ಭಾಗದಲ್ಲಿರುವ ಸಣ್ಣ ಹಿಮದ ಸ್ಫಟಿಕಗಳ ಮೂಲಕ ಸೂರ್ಯನ ಬೆಳಕು ವಕ್ರೀಭವನಗೊಂಡಾಗ ಇಂತಹ ಪ್ರಕಾಶಮಾನ…

Read More

ನವದೆಹಲಿ, ಸೆಪ್ಟೆಂಬರ್ 30: ಯುಪಿಐ ಪಾವತಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ದೇಶದ ಮೊಬೈಲ್ ಹಾಗೂ ರೀಟೇಲ್ ವರ್ತಕರು ಅಕ್ಟೋಬರ್ 2ರಂದು ‘ನೋ ಯುಪಿಐ ಡೇ’ ಆಚರಿಸಲು ಕರೆ ನೀಡಿದ್ದಾರೆ. ಮೊಬೈಲ್ ರೀಟೇಲ್ ಮಾರಾಟಗಾರರ ಸಂಸ್ಥೆ (AIMRA) ನೀಡಿರುವ ಈ ಕರೆಗೆ ಗ್ರಾಹಕ ಉತ್ಪನ್ನ ವಿತರಕರ ಒಕ್ಕೂಟ (AICPDF) ಕೂಡ ಬೆಂಬಲ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು…

Read More

ನವದೆಹಲಿ: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG)ಯನ್ನು ಪ್ರಸ್ತುತ ಇರುವ ಪೆನ್-ಪೇಪರ್ ಮಾದರಿಯಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಗೆ ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಅಗತ್ಯವಿರುವ ಆನ್‌ಲೈನ್ ಪರೀಕ್ಷಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಪರೀಕ್ಷಾ ಕೇಂದ್ರಗಳ ಲಭ್ಯತೆಯ ವ್ಯತ್ಯಾಸವನ್ನು ಕಡಿಮೆ ಮಾಡುವುದು ಹಾಗೂ ಎಲ್ಲ…

Read More

ಸೃಜನಶೀಲತೆ, ಡಿಸೈನ್ ಮತ್ತು ಡಿಜಿಟಲ್ ಕಂಟೆಂಟ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಉತ್ತಮ ಉದ್ಯೋಗಾವಕಾಶವೊಂದು ಲಭ್ಯವಾಗಿದೆ. ಗ್ರಾಫಿಕ್ ಡಿಸೈನ್ ಹಾಗೂ ವೀಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರತಿಭಾವಂತ ಅಭ್ಯರ್ಥಿಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಖಾಲಿ ಹುದ್ದೆಗಳು 1. ಗ್ರಾಫಿಕ್ ಡಿಸೈನರ್ (Graphic Designer)ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ಆಕರ್ಷಕ ಪೋಸ್ಟರ್‌ಗಳು, ಕ್ರಿಯೇಟಿವ್‌ಗಳು, ಬ್ಯಾನರ್‌ಗಳು, ಥಂಬ್‌ನೈಲ್‌ಗಳು ಸೇರಿದಂತೆ ವಿವಿಧ ದೃಶ್ಯಾತ್ಮಕ ವಿನ್ಯಾಸಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದೆ. 2.…

Read More

ಮಂಗಳೂರು: ನಗರದ ಎಂಆರ್‌ಪಿಎಲ್‌ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಕಂಪಿಸಿದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಸ್ಫೋಟದ ಬಳಿಕ ಘಟನಾ ಸ್ಥಳದಿಂದ ದಟ್ಟ ಹೊಗೆ ಆಕಾಶದಲ್ಲಿ ಆವರಿಸಿಕೊಂಡಿದ್ದು, ಸುತ್ತಮುತ್ತಲಿನ ಹಾಗೂ ದೂರದ…

Read More