ಉಡುಪಿ: ಮಣಿಪಾಲದ ಲೇಕ್‌ವ್ಯೂ ಕಟ್ಟಡದಲ್ಲಿರುವ ಜನರಲ್ ಸ್ಟೋರ್‌ನಲ್ಲಿ ಮೊಬೈಲ್ ಫೋನ್ ಕಳವು ಮಾಡಿರುವ ಘಟನೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮೊಬೈಲ್ ಕಳವು ಮಾಡಿದ್ದು, ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಯ ಗುರುತು ಪತ್ತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಲಾಗಿದೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
Author: Karavali TV
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೆಡಿಪಿ ಸಭೆಗೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಗೈರುಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ “ಪೊಲೀಸ್ ಕಮಿಷನರ್ ಎಲ್ಲಿ?” ಎಂದು ಪ್ರಶ್ನಿಸಿದ ಸಚಿವರಿಗೆ, ಡಿಸಿಪಿ ಸ್ಯಾಮ್ ವರ್ಗೀಸ್ ಸಮಜಾಯಿಷಿ ನೀಡಲು ಮುಂದಾದರು. ಆದರೆ ವಿವರಣೆಯಿಂದ ಸಮಾಧಾನಗೊಳ್ಳದ ಖಾದರ್, “ರೂಲ್ಸ್ ಎಲ್ಲರಿಗೂ ಒಂದೇ” ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಸಭೆಗೆ ಬರಲು ಸಾಧ್ಯವಾಗದಿದ್ದರೆ ಅಧಿಕಾರಿಗಳು ಒಂದು ದಿನ…
ಕುಂದಾಪುರ: ಕರಾವಳಿ ಕರ್ನಾಟಕ ಭಾಗದ ಯುವಜನತೆಗೆ ವ್ಯಾಪಕ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕುಂದಾಪುರದ ಮೂಡಲಕಟ್ಟೆಯ ತಾಂತ್ರಿಕ ವಿದ್ಯಾಲಯದ (ಎಂಐಟಿ) ಆವರಣದಲ್ಲಿ ಸೆಪ್ಟೆಂಬರ್ 17 ಮತ್ತು 18ರಂದು ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್‌ಪ್ರೆಸ್ – 2026’ ಆಯೋಜಿಸಲಾಗಿದೆ. ಎಂಐಜೆ ಶಿಕ್ಷಣ ಸಂಸ್ಥೆಗಳು, ಎಂಐಟಿ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮೈಕ್ರೋಸಾಫ್ಟ್ ಮತ್ತು ಮೈಟಿ (MeitY) ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 35ಕ್ಕೂ ಹೆಚ್ಚು ಕಂಪನಿಗಳು ಭಾಗಿ,…
ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಪಶ್ಚಿಮಘಟ್ಟ ತಪ್ಪಲು ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಕಾರ್ಕಳ ಕ್ಷೇತ್ರದ ಹಲವು ಗ್ರಾಮಗಳು ವರದಿ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 18ರಂದು ಹೆಬ್ರಿಗೆ…
ಡೆಂಗ್ಯೂ ಎಂದಾಕ್ಷಣ ಹೆಚ್ಚಿನ ಜ್ವರ, ತೀವ್ರ ತಲೆನೋವು, ಮೈ-ಕೈ ನೋವು ಮತ್ತು ಸುಸ್ತು ನೆನಪಾಗುವುದು ಸಾಮಾನ್ಯ. ಆದರೆ, ಜ್ವರವಿಲ್ಲದೆಯೂ ಡೆಂಗ್ಯೂ ಸೋಂಕು ಇರಬಹುದು ಎಂಬ ಸತ್ಯ ಹಲವರಿಗೆ ತಿಳಿದಿಲ್ಲ. ಇಂತಹ ಸಂದರ್ಭಗಳಲ್ಲಿ ವಾಂತಿ, ಹೊಟ್ಟೆ ನೋವು, ಅತಿಸಾರ ಹಾಗೂ ಸುಸ್ತಿನಂತಹ ಅಸಹಜ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸ್ಥಿತಿಯನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಮಳೆಗಾಲದಲ್ಲಿ ವಾಂತಿ, ವಾಕರಿಕೆ, ಅತಿಸಾರ ಅಥವಾ ಜ್ವರ ಕಾಣಿಸಿಕೊಂಡಾಗ ಡೆಂಗ್ಯೂ ಇರಬಹುದೇ ಎಂಬ ಅನುಮಾನ ಮೂಡುವುದು…
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಹಾಲಿನ ಕ್ಯಾಂಟರ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ. ಗೌರಿ-ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪತಿ ಮುತ್ತುರಾಜ್, ಪತ್ನಿ ಕಾವ್ಯ ಹಾಗೂ 8 ವರ್ಷದ ಮಗಳು ಕೀರ್ತನ ಮೃತಪಟ್ಟಿದ್ದಾರೆ. ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಹಾಗೂ ಚಾಲಕನನ್ನು ಪೊಲೀಸರು…
ಕುಂದಾಪುರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಬಳ್ಕೂರು–ಕಂಡ್ಲೂರು ಸಂಪರ್ಕಿಸುವ ಹಳೆ ಸೇತುವೆ ನೆಲಸಮಗೊಳಿಸುವ ಲೋಕೋಪಯೋಗಿ ಇಲಾಖೆಯ ನಿರ್ಧಾರದ ಹಿಂದೆ ಭ್ರಷ್ಟಾಚಾರದ ಹುನ್ನಾರವಿದೆ ಎಂದು ಕೆಪಿಸಿಸಿ ಸಂಯೋಜಕ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಬಾಕಿಯಿದೆ. ಆದರೆ ಯೋಜನೆ ರೂಪಿಸುವಾಗ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸದಿರುವುದು ಇಲಾಖೆಯ ಬೇಜವಾಬ್ದಾರಿತನ ಎಂದು ಅವರು ಟೀಕಿಸಿದ್ದಾರೆ. ಹಳೆ ಸೇತುವೆ ಒಡೆಯುವ ಮೂಲಕ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ…
ಮೇಷಮೇಷ ರಾಶಿಯ ಜನರ ಖರ್ಚುಗಳು ಇಂದು ಹೆಚ್ಚಾಗುತ್ತವೆ, ಆದರೆ ಹಣ ಗಳಿಸುವ ಹೊಸ ಮೂಲಗಳು ಸಹ ಸೃಷ್ಟಿಯಾಗುತ್ತವೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ನೀವು ಇಂದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಓದು ಬರಹದಲ್ಲಿ ಸಮಯ ಕಳೆಯಿರಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದರೊಂದಿಗೆ ನೀವು ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ…
ಉಡುಪಿಯಲ್ಲಿ ಪ್ರಮುಖ ಜಾಹೀರಾತು ಸಂಸ್ಥೆಯೊಂದು (Leading Advertisement Company) ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಲು ಉತ್ಸುಕರಾಗಿರುವ ಮತ್ತು ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಹಾಗೂ ಕಮ್ಯುನಿಕೇಷನ್ ಸಾಮರ್ಥ್ಯ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಖಾಲಿ ಇರುವ ಪ್ರಮುಖ ಹುದ್ದೆಗಳ ವಿವರ: ಉದ್ಯೋಗ ಕಾರ್ಯಸ್ಥಳವು ಉಡುಪಿ (Udupi) ಆಗಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿ/ಬಯೋಡೇಟಾವನ್ನು (CV) 9663579219 ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ…
ಉಡುಪಿ: ಉಡುಪಿಯ ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ ಮಾರುತಿ ವೀಥಿಕದ 26ನೇ ವರ್ಷದ ಗಣೇಶೋತ್ಸವದಲ್ಲಿ ‘ಪಂಚ ಹಸಿರೆಲೆ ಗಣಪ’ ವಿಶೇಷ ಆಕರ್ಷಣೆಯಾಗಿದೆ. ಮಾವಿನ ಎಲೆ, ವೀಳ್ಯದೆಲೆ, ಎಕ್ಕದ ಎಲೆ, ಬಾಳೆ ಎಲೆ ಹಾಗೂ ಹಲಸಿನ ಎಲೆಗಳನ್ನು ಆಧರಿಸಿ ಈ ವಿಶೇಷ ಗಣಪತಿ ವಿಗ್ರಹವನ್ನು ಕಿನ್ನಿಮೂಲ್ಕಿಯ ದಿವಂಗತ ಸದಾಶಿವ ಆಚಾರ್ಯರ ಪುತ್ರರಾದ ಕಾರ್ತಿಕ್ ಆಚಾರ್ಯ ಮತ್ತು ಕೌಶಿಕ್ ಆಚಾರ್ಯ ಅವರು ತಮ್ಮ ಕೈಚಳಕದಲ್ಲಿ ರೂಪಿಸಿದ್ದಾರೆ. ಶ್ರೀ ಗುರುರಾಜ್ ಎಂ. ಶೆಟ್ಟಿ ಅವರ…
