Author: Karavali TV

ನೂತನ ಜವಾಬ್ದಾರಿ: ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ವರ್ಗಾವಣೆ ವಿವರ: ಈ ಹಿಂದೆ ಇಲ್ಲಿದ್ದ ಡಿಸಿಪಿ ಮಿಥುನ್ ಎಚ್.ಎನ್. ಅವರು ಗದಗ ಜಿಲ್ಲೆಯ ಎಸ್ಪಿ ಆಗಿ ವರ್ಗಾವಣೆಗೊಂಡ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ. ಸ್ಯಾಮ್ ವರ್ಗೀಸ್ ಈ ಮೊದಲು ಬೆಂಗಳೂರಿನ ಸಿಐಡಿ ವಿಭಾಗದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಹಿನ್ನೆಲೆ: 2022ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್…

Read More

ನವದೆಹಲಿ: ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್‌ಗೆ ಇದ್ದ 45 ದಿನಗಳ ಅಂತರವನ್ನು ಕೇಂದ್ರ ಸರ್ಕಾರ 25 ದಿನಗಳಿಗೆ ಇಳಿಸಿದೆ. ಇನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲಾ ಗೃಹಬಳಕೆ ಎಲ್‌ಪಿಜಿ ಗ್ರಾಹಕರು 25 ದಿನಕ್ಕೊಮ್ಮೆ ಸಿಲಿಂಡರ್ ಬುಕ್ ಮಾಡಬಹುದು. ಈ ಬದಲಾವಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ. ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು…

Read More

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿಯ ಜನ್ಮದಿನ ಹಾಗೂ ಮೊಂತಿ ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಹೊಸ ತೆನೆಗೆ ಪೂಜೆ, ವಿಶೇಷ ಪ್ರಾರ್ಥನೆ ಹಾಗೂ ಮಾತೆ ಮೇರಿಯ ಬಾಲ ರೂಪದ ಪ್ರತಿಮೆಗೆ ಮಕ್ಕಳಿಂದ ಪುಷ್ಪಾರ್ಚನೆ ನಡೆಯಿತು. ಕಳೆದ ಒಂಬತ್ತು ದಿನಗಳಿಂದ ನಡೆದ ಪುಷ್ಪಾರ್ಚನೆಯ ವೈಭವ ಮಂಗಳವಾರ ಮತ್ತಷ್ಟು ಕಳೆಗಟ್ಟಿತು. ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.…

Read More

ಮಂಗಳೂರು: ಕರಾವಳಿ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕೇರಳ ಮಾದರಿಯ ಹೌಸ್‌ಬೋಟ್ ಹಾಗೂ ಕ್ರೂಸ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಂಗಳೂರು-ಗೋವಾ ನಡುವೆ ವಿವಿಧ ತಾಣಗಳಲ್ಲಿ ನಿಲುಗಡೆ ಹೊಂದಿರುವ ಕ್ರೂಸ್ ಸೇವೆ ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು. ನವಮಂಗಳೂರು ಬಂದರಿಗೆ ಆಗಮಿಸುವ ಅಂತಾರಾಷ್ಟ್ರೀಯ…

Read More

ಮೇಷಮೇಷ ರಾಶಿಯವರಿಗೆ ಬಹಳ ದಿನಗಳ ನಂತರ ಇಂದು ನಿಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಲು ನಿಮಗೆ ಉತ್ತಮ ಸಮಯ ಸಿಗಲಿದೆ. ಇಷ್ಟು ದಿನ ಕೆಲಸ, ಜವಾಬ್ದಾರಿ ಎಂದು ಓಡಾಡುತ್ತಿದ್ದ ನೀವು, ಇಂದು ನಿಮ್ಮ ಬಗ್ಗೆ ಮತ್ತು ನಿಮ್ಮ ಆರಾಮದ ಬಗ್ಗೆ ಯೋಚಿಸಬಹುದು. ಮುಂಬರುವ ದಿನಗಳಿಗೆ ಬೇಕಾಗುವ ಬಟ್ಟೆ, ಆಭರಣ, ವೈಯಕ್ತಿಕ ವಸ್ತುಗಳು ಸೇರಿದಂತೆ ನಿಮ್ಮ ಬಳಿಯಿರುವ ವಸ್ತುಗಳನ್ನು ಸರಿಪಡಿಸಿ, ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಒಳಿತು. ಕುಟುಂಬದವರೊಂದಿಗೆ ಸ್ವಲ್ಪ ಸಮಯ ಕಳೆಯುವುದರಿಂದ…

Read More

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಹೆಸರಿನ ವಿಚಾರದಲ್ಲಿ ಉಂಟಾಗಿದ್ದ ಮತದಾರರ ಪಟ್ಟಿಯ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ. 2002ರ ಮತದಾರರ ಪಟ್ಟಿಯಲ್ಲಿ ಕೇವಲ ‘ಹಾಜಬ್ಬ’ ಎಂದು ಹೆಸರು ದಾಖಲಾಗಿದ್ದರೆ, ಪ್ರಸ್ತುತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನೋಟಿಸ್ ನೀಡಿದ್ದ ಅಧಿಕಾರಿಗಳು, ಅದೇ ದಿನ ದಾಖಲೆಗಳನ್ನು ಪರಿಶೀಲಿಸಿ ಹೆಸರನ್ನು ಸರಿಪಡಿಸಿದ್ದಾರೆ. ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಕೊಡುಗೆಗಾಗಿ ಹರೇಕಳ ಹಾಜಬ್ಬ…

Read More

ಕುಂದಾಪುರ: ತ್ರಾಸಿ ಬೀಚ್ ಅಭಿವೃದ್ಧಿಗೆ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಬೀಚ್‌ಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು, ಸ್ಕೈವಾಕ್ ಹಾಗೂ ಸಾಹಸ ಉದ್ಯಾನವನ ಸೇರಿದಂತೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

Read More

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ನಿವಾಸಿ ಗಂಗಾಧರ ಮಂಜರು ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಡ್‌ರೂಮ್‌ನಲ್ಲಿಟ್ಟಿದ್ದ ಬೀಗ ಹಾಕದ ಗೋಡ್ರೆಜ್‌ ಅಲ್ಮೆರಾದಿಂದ ಈ ಕಳುವು ನಡೆದಿದೆ. ಕಳೆದ ಆಗಸ್ಟ್ 17ರಂದು ಬೆಳಿಗ್ಗೆ 10:00 ಗಂಟೆಗೆ ಗಂಗಾಧರ ಅವರು ಗೋಡ್ರೆಜ್‌ನಲ್ಲಿದ್ದ ಪರ್ಸ್ ಪರಿಶೀಲಿಸಿದಾಗ ಆಭರಣಗಳು ಸುರಕ್ಷಿತವಾಗಿದ್ದವು.…

Read More

ಉಡುಪಿ: ಕೇರಳದ ರಾಜ್ಯಸಭಾ ಸದಸ್ಯ ಹಾಗೂ ಆರ್‌ಎಸ್‌ಎಸ್‌ ಪ್ರಚಾರಕರಾದ ಸದಾನಂದ ಮಾಸ್ಟರ್ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಸದಾನಂದ ಮಾಸ್ಟರ್ ಅವರಿಗೆ ಪ್ರಸಾದ ನೀಡಿ ಗೌರವಿಸಿದರು.

Read More

ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆ ಸಹಯೋಗದಲ್ಲಿ ಸೆಪ್ಟೆಂಬರ್ 9ರಿಂದ 15ರವರೆಗೆ ‘ವನಸುಮ ಜೇಸಿ ಸಪ್ತಾಹ’ ಆಯೋಜಿಸಲಾಗಿದೆ. ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.9ರಂದು ‘ಛತ್ರಪತಿ ಶಿವಾಜಿ’ ನಾಟಕ, ಸೆ.10ರಂದು ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಪ್ರದರ್ಶನ, ಸೆ.11ರಂದು ‘ವಿಕ್ರಂ ವೇದ’ ನಾಟಕ ನಡೆಯಲಿದೆ. ಸೆ.12ರಂದು ‘ಕಥೆ ಎಡ್ಡೆಂಡು’ ನಾಟಕ, ಸೆ.13ರಂದು ಸಂಜೆ…

Read More