ತಮಿಳುನಾಡಿನ ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿರುವ ಮಿಂಜೂರ್ ರೈಲ್ವೇ ನಿಲ್ದಾಣದಲ್ಲಿ ಮಧ್ಯವಯಸ್ಕನೊಬ್ಬ ಸೂಟ್ಕೇಸ್ನ್ನು ಬಿಟ್ಟು ಹೋಗಿದ್ದರಿಂದ ಆತಂಕಗೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಒಳಗೆ ಮಹಿಳೆಯ ಶವವಿರುವುದು ಪತ್ತೆಯಾಗಿದೆ.
ನವೆಂಬರ್ 4 ರ ಸೋಮವಾರ ತಡರಾತ್ರಿ, 43 ವರ್ಷದ ಬಾಲಸುಬ್ರಮಣ್ಯಂ ಮತ್ತು 17 ವರ್ಷದ ಮಗಳು ದೊಡ್ಡ ಸೂಟ್ಕೇಸ್ನೊಂದಿಗೆ ನಿಲ್ದಾಣಕ್ಕೆ ಬಂದಿದ್ದರು. ಆದರೆ ಹೋಗುವಾಗ ಸೂಟ್ಕೇಸ್ನ್ನು ಅಲ್ಲಿಯೇ ಬಿಟ್ಟು ಹೊರಹೋಗಲು ಯತ್ನಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಸಾಮಾನು ಸರಂಜಾಮು ಬಿಟ್ಟು ಹೋಗಿರುವ ಬಗ್ಗೆ ಆತಂಕಗೊಂಡ ಪ್ರಯಾಣಿಕರು ತಕ್ಷಣವೇ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ . ಸೂಟ್ಕೇಸ್ ತುಂಬಾ ದೊಡ್ಡದಾಗಿದ್ದ ಕಾರಣ, ಆರ್ಪಿಎಫ್ ಅಧಿಕಾರಿಗಳು ಅನುಮಾನಗೊಂಡು ಕೊರುಕ್ಕುಪೇಟೆ ಪೊಲೀಸರನ್ನು ಸಂಪರ್ಕಿಸಿದರು.
ಇಲ್ಲಿ ಏನೋ ತಪ್ಪಿದೆ ಎಂದು ಗ್ರಹಿಸಿದ ಅಧಿಕಾರಿಗಳು ಸೂಟ್ಕೇಸ್ನ ಬಗ್ಗೆ ಬಾಲಸುಬ್ರಮಣ್ಯಂ ಅವರನ್ನು ವಿಚಾರಿಸಿದ್ದಾಗ, ಅವರ ಅಸ್ಪಷ್ಟ ವಿವರಣೆ ಮತ್ತಷ್ಟು ಅನುಮಾನವನ್ನು ಹುಟ್ಟುಸಿತ್ತು.
ಪೊಲೀಸರು ಸೂಟ್ಕೇಸ್ ತೆರೆದು ಬಿಚ್ಚುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ . ಸೂಟ್ಕೇಸ್ ನಲ್ಲಿ ಶವವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಲಾಗಿತ್ತು, ಶವದ ತಲೆಗೆ ಗಾಯಗಳಾಗಿದ್ದವು. ತಕ್ಷಣವೇ ಪೊಲೀಸರು ಬಾಲಸುಬ್ರಮಣ್ಯಂ ಮತ್ತು ಅವರ ಪುತ್ರಿ ಇಬ್ಬರನ್ನೂ ಬಂಧಿಸಿ, ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

