ಚಳಿಗಾಲ ಪ್ರಾರಂಭವಾದ ಕೂಡಲೇ ಹೆಚ್ಚಿನವರ ಚರ್ಮದಲ್ಲಿ ಬಿರುಕು ಬಿಡುವುದು, ತುಟಿ ಒಡೆಯುವುದು, ಪಾದ ಬಿರುಕು ಬಿಡುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಇದಕ್ಕಿರುವ ಪರಿಹಾರಗಳು ಏನು ತಿಳಿದುಕೊಳ್ಳೋಣ .
ಚಳಿಗಾಲದ ಸಮಯದಲ್ಲಿ ನಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಮ್ಮ ಚರ್ಮವು ತುಂಬಾ ಒಣಗಿರುತ್ತದೆ.
ಈ ಸಮಯದಲ್ಲಿ ತ್ವಚೆಯನ್ನು ಬಾಹ್ಯವಾಗಿ ಸ್ವಚ್ಛಗೊಳಿಸುವುದರೊಂದಿಗೆ ಆಂತರಿಕವಾಗಿಯೂ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಹಸಿ ಹಾಲಿನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬಹುದು. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವು ಕಂಡುಬರುವುದರಿಂದ, ಇದು ಚರ್ಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ತ್ವಚೆಯನ್ನು ಪೋಷಿಸಲು, ಚರ್ಮವನ್ನು ಮಸಾಜ್ ಮಾಡುವುದು ಅವಶ್ಯಕವಾಗಿರುತ್ತದೆ.
ಚಳಿಗಾಲದಲ್ಲಿ ಚರ್ಮವು ತುಂಬಾ ಒಣಗಿರುವುದರಿಂದ, ನೀವು ಅಲೋವೆರಾ ಜೆಲ್ ಅಥವಾ ತೆಂಗಿನ ಎಣ್ಣೆಯಿಂದ ತ್ವಚೆಯನ್ನು ಮಸಾಜ್ ಮಾಡಿಕೊಳ್ಳಬಹುದು.
ಚಳಿಗಾಲದಲ್ಲಿ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇದು ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಚರ್ಮಕ್ಕೆ ಮಾಯಿಶ್ಚರೈಸರ್ ಕ್ರೀಮ್ ಬಳಸುವುದು ಬಹಳ ಮುಖ್ಯ.
