ಕುಂದಾಪುರ:- ಕುರುಚಲು ಗಿಡಗಳಿರುವ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಅದರ ಪರಿಣಾಮ ಅಲ್ಲೇ ಸಮೀಪದಲ್ಲೇ ನಿಲ್ಲಿಸಿದ್ದ ವಾಹನಗಳೂ ಹಾನಿಯಾಗಿರುವ ಘಟನೆ ಕುಂದಾಪುರದ ತ್ರಾಸಿ ಜಂಕ್ಷನ್ ಬಳಿ ನಿನ್ನೆ ನಡೆದಿದೆ.
ಈ ಘಟನೆ ಒಂದೇ ಸಮನೆ ಹೇಗಾಯ್ತು ಅನ್ನುವಂತದ್ದು ತಿಳಿದುಬಂದಿಲ್ಲ. ಮೊದಲು ಕುರುಚಲು ಗಿಡಗಳಿಗೆ ಬೆಂಕಿ ಹತ್ತಿಕೊಂಡಿದ್ದು ಬಳಿಕ ಅದರ ಪರಿಣಾಮ ಹತ್ತಿರದಲ್ಲೇ ನಿಲ್ಲಿಸಿದ್ದ ರಿಪೇರಿ ವಾಹನಗಳಿಗೂ ಬೆಂಕಿ ತಗುಲಿದೆ. ಬೆಂಕಿಯಿಂದ ವಾಹನಗಳು ಹಾನಿಗೊಂಡಿವೆ.
ಸ್ಥಳೀಯರು ಬೆಂಕಿ ನೋಡಿದ ತಕ್ಷಣ ನೀಡಿದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ ವಾಹನಗಳಲ್ಲಿ ಬಂದು ಬೆಂಕಿ ನಂದಿಸಿದರು. ಇದರಿಂದ ಅಕ್ಕ-ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯಲಾಯಿತು. ಯಾವುದೇ ಪ್ರಾಣಾಪಾಯ ಮಾತ್ರ ಸಂಭವಿಸಿಲ್ಲ.

