ಕಾರ್ಕಳ:- ಗೇರು ಬೀಜ ಉದ್ಯಮಿಗೆ ವ್ಯಕ್ತಿಯೋರ್ವ ಲಕ್ಷಾಂತರ ರೂ. ಪಂಗನಾಮ ಹಾಕಿದ ಘಟನೆ ಕಾರ್ಕಳದ ಕಡ್ತಲ ಎಂಬಲ್ಲಿ ನಡೆದಿದೆ.
ಗೊಬಿಂದ್ ಡ್ರೈಫ್ರೂಟ್ಸ್ ಕಂಪೆನಿ ಮಹಾದೇವ್ ನಗರ ಕರಾಡಿ ಇಂಡಸ್ಟ್ರಿಯಲ್ ಏರಿಯ ಪುಣೆ ಇದರ ಮಾಲಕ ದಲ್ಜೀತ್ ಸಿಂಗ್ ಎಂಬಾತ ವಂಚಿಸಿದ ಆರೋಪಿಯಾಗಿದ್ದಾನೆ. ಇವನಿಗೆ ಕಡ್ತಲ ತಿರುಮಲ ಕ್ಯಾಶ್ಯೂ ಇಂಡಸ್ಟ್ರೀಸ್ ಪಾಲುದಾರ ಯೋಗೀಶ್ ಎಂಬವರು 22,100300 ರೂ ಬೆಲೆ ಬಾಳುವ 18000ಕೆಜಿ ಕಚ್ಚಾ ಗೋಡಂಬಿಯನ್ನು ಒಂದು ವಾಹನದಲ್ಲಿ ಕಳಿಸಿದ್ದಾರೆ.
ಆದರೆ ಆರೋಪಿ ಸ್ವಲ್ಪ ಹಣವನ್ನು ಪಾವತಿಸಿ ಒಟ್ಟು 11464400 ರೂ. ಹಣವನ್ನು ನೀಡದೆ ವಂಚಿಸಿದ್ದಾನೆ. ಈ ಬಗ್ಗೆ ಯೋಗಿಶ್ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


