ಕಾಪು:- ಸಮಾಜ ಸೇವಕಿಯೋರ್ವರು ಸಾಕುತ್ತಿದ್ದ ನಾಯಿಮರಿಗೆ ಕಟುಕನೋರ್ವ ವಿಷವೂಟ ಉಣಿಸಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ದೂರು ದಾಖಲಾಗಿದೆ. ಕುಮಾರ್ ಎಂಬಾತ ಆರೋಪಿಯಾಗಿದ್ದಾರೆ.
ಸಮಾಜಸೇವಕಿ ಬಿಂದು ಎಂಬವರು ಐದು ವರ್ಷದ ಹಿಂದೆ ದೇಸೀ ನಾಯಿಮರಿಯನ್ನು ಸಾಕಿದ್ದರು. ಕಳೆದ ಆರು ತಿಂಗಳಿಂದ ಅದು ಗಡ್ಡೆ ಖಾಯಿಲೆಯಿಂದ ಬಳಲುತ್ತಿತ್ತು. ಇದೀಗ ಚಿಕಿತ್ಸೆಯ ಪರಿಣಾಮ ಸುಧಾರಿಸಿಕೊಳ್ಳುತ್ತಿದೆ.
ಕುಮಾರ್ ಎಂಬವರು ಆ ನಾಯಿಗೆ ರಾತ್ರಿ ವಿಷ ಪದಾರ್ಥ ಹಾಕಿ ಊಟ ಉಣಬಡಿಸಿದ್ದು ಅದನ್ನು ತಿಂದ ನಾಯಿ ಸಾವನ್ನಪ್ಪಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


