ಕಟಪಾಡಿ:- ಅಪರಿಚಿತ ವ್ಯಕ್ತಿಯೋರ್ವರ ಶವ ಕಟಪಾಡಿಯ ಏಣಗುಡ್ಡೆ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಸುಮಾರು ನಲ್ವತ್ತರಿಂದ ನಲ್ವತ್ತೈದು ವರ್ಷದ ಗಂಡಸಿನ ಶವ ಇದಾಗಿದ್ದು ಅರ್ಧ ಕೊಳೆತ ಸ್ಥಿತಿಯಲ್ಲಿದೆ. ಕುತ್ತಿಗೆಯಲ್ಲಿ ಕ್ರಿಶ್ಚಿಯನ್ನರು ಧರಿಸುವ ರೋಸರಿ ಸರ ಪತ್ತೆಯಾಗಿದೆ.
ಫಾರೆಸ್ಟ್ ಗೇಟ್ ಶಶಿತೋಟ ಎಂಬಲ್ಲಿನ ಜೋಸೆಫ್ ಮಂತೇರೋ ಎಂಬವರಿಗೆ ಪರಿಚಯದ ಓರ್ವ ವ್ಯಕ್ತಿ ಕಾಲ್ ಮಾಡಿ ಹೊಳೆಯಲ್ಲಿ ಮೃತದೇಹ ತೇಲುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಮೃತದೇಹ ಇತ್ತು. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳೀಯರಾದ ಕಾಪು ಸೂರಿ ಶೆಟ್ಟಿ, ಅಶೋಕ್ ಎಂಬವರು ಸೇರಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹದ ಗುರುತು ಪತ್ತೆಗಾಗಿ ಪ್ರಯತ್ನ ಮುಂದುವರೆದಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

