ಹೆಬ್ರಿ:- ಹಣಕಾಸಿನ ಲೆಕ್ಕಾಚಾರದ ವಿಚಾರದಲ್ಲಿ ಗಲಾಟೆಯುಂಟಾಗಿ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಹೆಬ್ರಿಯ ನಾಡ್ಪಾಲು ಗ್ರಾಮದ ನಂದಲ ದುರ್ಗಾಪರಮೇಶ್ವರಿ ದೇಗುಲದಲ್ಲಿ ನಡೆದಿದೆ.
ಫೆ.೨೦ಕ್ಕೆ ದೇವಸ್ಥಾನದ ವಾರ್ಷಿಕ ಜಾತ್ರೆ ನೆರವೇರಿತ್ತು. ಮರುದಿನ ಹಣಕಾಸಿನ ಲೆಕ್ಕಾಚಾರದ ವಿಚಾರದಲ್ಲಿ ಆನುವಂಶಿಕ ಆಡಳಿತ ವರ್ಗದವರಾದ ಮನೋರಮಾ, ಮತ್ತವರ ಕುಟುಂಬ ಜಗಳಕ್ಕಿಳಿದಿದೆ.
ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲು ಅರ್ಜಿ ಸಲ್ಲಿಸಿರುವ ಆಡಳಿತ ಮಂಡಳಿ ಜೊತೆಗೆ ವಿವಾದ ತಾರಕಕ್ಕೇರಿ ಗಲಾಟೆ ನಡೆದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


