ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಮುಖ್ಯವಾಗಿ ಹಣೆಗೆ ಬೊಟ್ಟು ಹಾಕುತ್ತಾರೆ. ವಿವಾಹಿತ ಮಹಿಳೆಯರ ಹಣೆಯಲ್ಲಂತೂ ಇದು ಕಡ್ಡಾಯ. ಇದು ಗಂಡನ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಹಣೆ ಬೊಟ್ಟು ಕೇವಲ ಸಂಪ್ರದಾಯವಲ್ಲ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇದೆ.
ಹಣೆಗೆ ಕುಂಕುಮ ಹಾಕುವಾಗ ನಾವು ಯಾವ ಬೆರಳು ಉಪಯೋಗಿಸುತ್ತೇವೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ಉಂಗುರ ಬೆರಳಿನಲ್ಲಿ ಕುಂಕುಮ ಹಾಕುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂಪತ್ತು ಬರುತ್ತದೆ ಹಾಗೂ ಆಯುಷ್ಯ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ಬೊಟ್ಟು ಹಾಕುವುದರಿಂದ ನರಗಳು ಉತ್ತೇಜಿಸಲ್ಪಡುತ್ತದೆ. ತಲೆನೋವನ್ನು ಕಡಿಮೆ ಮಾಡುತ್ತದೆ. ಹೀಗೆ ಅನೇಕ ಆರೋಗ್ಯ ಲಾಭಗಳಿವೆ. ಹಣೆಗೆ ಕುಂಕುಮ ಹಚ್ಚುವುದರಿಂದ ಸೂರ್ಯನ ಕಿರಣಗಳು ಅದರ ಮೇಲೆ ಬಿದ್ದು ದೇಹದಲ್ಲಿನ ನರಗಳು ಪ್ರಚೋದನೆಗೆ ಒಳಗಾಗುತ್ತದೆ ಎಂದು ಹೇಳಲಾಗುತ್ತದೆ.


