ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅನೇಕ ಅಕ್ರಮ ಹೋಂ ಸ್ಟೇಗಳಿವೆ. ಸದ್ಯ ಪ್ರವಾಸೋದ್ಯಮ ಇಲಾಖೆಯಡಿ ಒಟ್ಟು ನೂರ ಎಂಭತ್ತೇಳು ಹೋಂ ಸ್ಟೇಗಳು ನೋಂದಣಿ ಮಾಡಿಕೊಂಡು ಅಧಿಕೃತವಾಗಿ ಕಾರ್ಯಾಚರಿಸುತ್ತಿದೆ. ಆದರೆ ಅನಧಿಕೃತವಾಗಿರುವ ಸುಮಾರು ನೂರ ಇಪ್ಪತ್ತು ಹೋಂಸ್ಟೇಗಳಿಗೆ ಇದೀಗ ಪ್ರವಾಸೋದ್ಯಮ ಇಲಾಖೆ ಎರಡನೇ ಸುತ್ತಿನ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಗೆ ಸ್ಪಂದಿಸದ ಹೋಂ ಸ್ಟೇಗಳ ವಿರುದ್ಧ ಡಿಸಿ ನೇತೃತ್ವದ ಸಮಿತಿಗೆ ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುತ್ತದೆ. ಜಿಲ್ಲಾಡಳಿತದ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ.
ಇನ್ನು ದ.ಕ ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇಗಳಿಲ್ಲ. ಅದಕ್ಕಾಗಿ ಉಡುಪಿಯಲ್ಲಿ ಕೂಡಾ ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಲು ಇದೀಗ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.


