ಕಾರ್ಕಳ: ಕಾರ್ಕಳದ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇಗುಲಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ ನೀಡಿದರು.
ಕ್ಷೇತ್ರದ ಕಾರ್ಣಿಕತೆಯಿಂದ ಈ ದಂಪತಿ ಸಂತಾನ ಭಾಗ್ಯ ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿ ಪ್ರತೀ ವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ನಾಗದೇವರಿಗೆ ಸರ್ವಸೇವೆ ನೀಡಿದ ಇವರ ಪೂರ್ವಜರು ಮೂಲತಃ ಎರ್ಲಪಾಡಿಯವರು. ಹದಿನಾಲ್ಕು ವರ್ಷಗಳ ಹಿಂದೆ ಪತ್ನಿಯ ಜೊತೆ ಕ್ಷೇತ್ರಕ್ಕೆ ಭೇಟಿ ನೀಡಿ ನಾಗದೇವರಿಗೆ ವಿಶೇಷವಾದ ಪೂಜೆ ಸಲ್ಲಿಸಿದ್ದರು.


