ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಅನೇಕ ಅಪಘಾತ ಪ್ರಕರಣಗಳು ನಡೆಯುತ್ತಿದೆ. ಉಡುಪಿ-ಸುಬ್ರಹ್ಮಣ್ಯ ಸಂಪರ್ಕದ ರಾಜ್ಯ ಹೆದ್ದಾರಿ ದೆಂದೂರುಕಟ್ಟೆ ಕಲ್ಮಂಜೆ ಬಳಿ ಅವೈಜ್ಞಾನಿಕ ರಸ್ತೆಯಿಂದಾಗಿ ವಾಹನಗಳು ಗಮನಕ್ಕೆ ಬಾರದೆ ನಿರಂತರವಾಗಿ ಅಪಘಾತದ ತಾಣವಾಗಿ ಬಿಟ್ಟಿದೆ. ಸಾವಿನ ಕೂಪವಾಗಿ ಮಾರ್ಪಾಟ್ಟಿದೆ.
ಇಳಿಜಾರಿನಿಂದ ಕೂಡಿರುವ ಪ್ರದೇಶದಲ್ಲಿ ರಸ್ತೆಯ ಪಶ್ಚಿಮ ಪಾರ್ಶ್ವದಲ್ಲಿ ರಸ್ತೆಯುದ್ದಕ್ಕೂ ಡಾಮರು ಕಿತ್ತು ಹೋಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಿರಂತರ ಅಪಘಾತ ಪ್ರಕರಣಗಳು ನಡೆಯುತ್ತಿದೆ.
ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಸ್ತೆಯನ್ನು ಸಮತಟ್ಟುಗೊಳಿಸಿ ಸೂಚನಾ ಫಲಕಗಳು, ವೇಗ ತಡೆ ಅಥವಾ ಹಂಪ್ಸ್ ನಿರ್ಮಿಸಿದರೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಸಿಗಬಹುದು ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.


