ಮುಲ್ಕಿ: ದ.ಕ ಜಿಲ್ಲೆಯ ಮುಲ್ಕಿ ಸೀಮೆಯ ಒಂಭತ್ತು ಮಾಗಣೆಯ ಪ್ರಸಿದ್ಧ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರರಾಗಿದ್ದ ಮುಲ್ಕಿ ಕಕ್ವಗುತ್ತು ಎನ್. ಎಸ್ ಮನೋಹರ್ ಶೆಟ್ಟಿ ಅವರು ಅನಾರೋಗ್ಯಕ್ಕೀಡಾಗಿ ಬುಧವಾರ ನಿಧನರಾಗಿದ್ದಾರೆ.
ಇವರು ಕಳೆದ ಹಲವಾರು ವರ್ಷಗಳಿಂದ ದೇಗುಲದ ಆಡಳಿತ ಮೊಕ್ತೇಸರರಾಗಿ ದೇಗುಲದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮತ್ತು ಸುಂದರ್ ರಾಮ್ ಶೆಟ್ಟಿ ಟ್ರಸ್ಟ್ ನಲ್ಲಿ ಗೌರವ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಇವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರತಿಷ್ಠಿತ ವಿಜಯ ಬ್ಯಾಂಕ್ ನ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.


