ಬೇಸಿಗೆ ಕಾಲದಲ್ಲಿ ನಾವು ತಂಪಾದ ಆಹಾರ ಮತ್ತು ತಂಪು ಪಾನೀಯಗಳನ್ನು ಸೇವಿಸಲು ಇಚ್ಛಿಸುತ್ತೇವೆ. ಅಂಗಡಿಗಳಲ್ಲಿ ಸಿಗುವ ಸಾಫ್ಟ್ ಡ್ರಿಂಕ್ಸ್ ಗಳನ್ನು ಕುಡಿಯುವ ಬದಲು ಮನೆಯಲ್ಲೇ ಕೆಲವು ತಂಪು ಪಾನೀಯಗಳನ್ನು ಸಿದ್ಧಪಡಿಸಿ ಕುಡಿಯಬಹುದು. ಆ ರೀತಿ ಮಾಡಿಕೊಳ್ಳಬಹುದಾದ ಪಾನೀಯಗಳಲ್ಲಿ ಮಜ್ಜಿಗೆಯೂ ಒಂದು. ಇದನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ.
ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆ ಫುಲ್ ಆಗುವುದರ ಜೊತೆಗೆ ಕ್ಯಾಲೋರಿ ಕರಗಿಸಲು ಕೂಡಾ ಪ್ರಯೋಜನಕಾರಿ. ದೇಹದ ಕೊಬ್ಬು ಕರಗುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಮಜ್ಜಿಗೆಗೆ ಕಾಲು ಚಮಚದಷ್ಟು ಮೆಂತ್ಯೆ ಬೀಜವನ್ನು ಪುಡಿ ಮಾಡಿ ಬೆರೆಸಿ ಕುಡಿಯುವುದರಿಂದ ತೂಕ ಇಳಿಕೆಗೆ ಅತ್ಯಂತ ಸಹಾಯಕವಾಗುತ್ತದೆ.
ಬೇಸಿಗೆ ಕಾಲದಲ್ಲಿ ಮಜ್ಜಿಗೆ ಕುಡಿಯುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಇದರಲ್ಲಿರುವ ಪೋಷಕಾಂಶಗಳು ಮೂಳೆಯ ಬಲ ಸಂವರ್ಧನೆಗೆ ಸಹಾಯ ಮಾಡುತ್ತದೆ. ಹೀಗೆ ಅನೇಕ ರೀತಿಯ ಪ್ರಯೋಜನವಿರುವ ಈ ಸರಳ ಆಹಾರ ವಿಧಾನವನ್ನು ನಾವು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.


