ಕನ್ನಡದ ಅಭಿನಯ ಚಕ್ರವರ್ತಿ ಎಂದೇ ಅಭಿಮಾನಿಗಳ ಪ್ರೀತಿ ಗಳಿಸಿರುವ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಹೇಳಿರುವ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇವರು ಏನೇ ಮಾತಾಡಿದರೂ, ಏನೇ ಹೇಳಿಕೆ ನೀಡೋದಾದ್ರೂ ತೂಕದ ಮಾತನ್ನೇ ಆಡ್ತಾರೆ. ಅದರ ಹಿಂದೆ ಒಂದು ಬಲವಾದ ಕಾರಣವೂ ಇರುತ್ತೆ. ಈಗ ಇವರು ನೀಡಿರುವ ಹೇಳಿಕೆಯೊಂದು ನಿಜಕ್ಕೂ ಶಾಕ್ ಆಗಿದೆ.
ದಯವಿಟ್ಟು ನೀವು ನಿಮ್ಮನೆ ನೋಡ್ಕೊಳ್ಳಿ. ನಾವು ನಮ್ಮನೆ ನೋಡ್ಕೋತ್ತೀವೆ. ಅವರವರು ಅವರವರ ಮನೆ ನೋಡ್ಕೊಂಡ್ರೆ ಏರಿಯಾ ಚೆನ್ನಾಗಿರುತ್ತೆ. ಹಾಗೇ ಏರಿಯಾ, ಊರು, ರಾಜ್ಯ, ದೇಶಕ್ಕೂ ಅದೇ ಅನ್ವಯಿಸುತ್ತದೆ. ನಮ್ಮನ್ನು ನಾವು ಮೊದಲು ಚೆನ್ನಾಗಿ ನೋಡ್ಕೊಳ್ಳೋಣ ಎಂದಿದ್ದಾರೆ.
ಸುದೀಪ್ ಅವರ ಇಂತಹ ನೇರ ನುಡಿ ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತೆ. ಈ ರೀತಿಯ ಮಾತನ್ನು ಅಭಿಮಾನಿಗಳೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುತ್ತಾರೆ.


