ಕಾಪು: ಕಾಪುವಿನಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಮಾರಿಯಮ್ಮ ದೇಗುಲದಲ್ಲಿ ಇದೀಗ ವರ್ಷಾವಧಿ ಸುಗ್ಗಿ ಮಾರಿಪೂಜೆಗೆ ಸಿದ್ಧತೆ ಪೂರ್ಣಗೊಂಡಿದ್ದು ಇಂದಿನಿಂದ ಮಾರಿಪೂಜೆ ನಡೆಯಲಿದೆ.
ಹಳೇ ಮಾರಿಯಮ್ಮ ದೇಗುಲ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ಇಂದು ಮತ್ತು ನಾಳೆ ಮಾರಿಪೂಜೆ ಅದ್ಧೂರಿಯಾಗಿ ನಡೆಯಲಿದೆ. ಈ ಮೂರೂ ಕಡೆಯಲ್ಲಿ ಏಕಕಾಲದಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ದ.ಕ, ಉಡುಪಿ, ಕಾಸರಗೋಡು, ಉತ್ತರ ಕರ್ನಾಟಕ, ಹೆಬ್ರಿ ಕಡೆಗಳಿಂದಲೂ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಸುಮಾರು ಅರ್ವತ್ತೈದು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಹೊಸ ಮಾರಿಗುಡಿಯಲ್ಲಿ ಈ ಬಾರಿ ವಿಶೇಷತೆಯಿಂದ ಸುಗ್ಗಿ ಪೂಜೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೂಡಾ ಆಗಮಿಸುವ ಸಾಧ್ಯತೆ ಇದೆ ಎಂದು ದೇಗುಲದ ಆಡಳಿತ ಸಮಿತಿ ತಿಳಿಸಿದೆ.

