ಮೂಡುಬಿದಿರೆ: ದ.ಕ ಜಿಲ್ಲೆಯಲ್ಲಿ ಈ ವರ್ಷದ ಕಂಬಳಗಳು ಮುಕ್ತಾಯದ ಹಂತದಲ್ಲಿದ್ದು ಇನ್ನು ಮೂರ್ನಾಲ್ಕು ಕಂಬಳಗಳು ಬಾಕಿಯುಳಿದಿವೆ. ಈ ಕಂಬಳವನ್ನು ಯಾವುದೇ ವಿವಾದ ಸೃಷ್ಟಿಯಾಗದಂತೆ ಗೊಂದಲವಿಲ್ಲದೆ ನಡೆಸಲು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ.
ಮೂಡುಬಿದಿರೆಯ ಸೃಷ್ಟಿ ಗಾರ್ಡನ್ ನಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮೀಟಿಂಗ್ ನಲ್ಲಿ ಈ ಬಾರಿ ಒಂದೆರಡು ಕಂಬಳಗಳಲ್ಲಿ ಗೊಂದಲಗಳು ಉಂಟಾಗಿದ್ದು ಅದು ಪುನರಾವರ್ತನೆ ಆಗದಂತೆ ಕಂಬಳದ ತೀರ್ಪುಗಾರರು, ಯಜಮಾನರು ಸಹಕರಿಸುವಂತೆ ಮನವಿ ಮಾಡಲಾಯಿತು.
ಕೋಣವನ್ನು ಸಮಯಕ್ಕೆ ಸರಿಯಾಗಿ ಬಿಡುವ ಮೂಲಕ ಕಂಬಳ ಕಾಲಮಿತಿಯೊಳಗೆ ನಡೆಸುವಂತೆ ಕೋರಲಾಯಿತು. ತೀರ್ಪಿನಲ್ಲಿ ಯಾವುದೇ ಗೊಂದಲವಾಗದಂತೆ ಎಚ್ಚರ ವಹಿಸಬೇಕು ಎಂಬ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಯಿತು.

