ಕಾಸರಗೋಡು: ಕೇರಳದ ಕಾರ್ಣಿಕ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಮಧೂರು ಮದನಂತೇಶ್ವರ ದೇಗುಲವೂ ಒಂದು. ಇಲ್ಲಿ ಮೊನ್ನೆ ತಾನೇ ಹದಿನಾಲ್ಕು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ಕೂಡಾ ಜರುಗಿತ್ತು. ಈ ಸಂದರ್ಭ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ದೇವರಿಗೆ ವಿಶೇಷವಾದ ಸೇವೆ ನೀಡಿದ್ದಾರೆ.
ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿರದಿದ್ದರೂ ಕೂಡಾ ತಮ್ಮ ಹೆಸರಿನಲ್ಲಿ ನೂರ ಇಪ್ಪತ್ತೆಂಟು ತೆಂಗಿನಕಾಯಿಗಳ ಅಷ್ಟ ದ್ರವ್ಯ ಮಹಾಗಣಪತಿಯಾಗ ಮತ್ತು ಮೂಡಪ್ಪ ಸೇವೆಯನ್ನು ಭಕ್ತಿಪೂರ್ವಕವಾಗಿ ಸಲ್ಲಿಸಿದ್ದಾರೆ.
ಬಾಹುಬಲಿ ಸಿನಿಮಾದ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಅನುಷ್ಕಾ ಅವರು ಮತ್ತೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಇದೀಗ ಸಿನಿಮಾ ಶೂಟಿಂಗ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ.

