ಭಾರತದಲ್ಲಿ ವಿಶೇಷ ಶೈಲಿಯ ಆಹಾರ ಪದ್ಧತಿಯಿದೆ. ಒಬ್ಬರಿಗಿಂತ ಒಬ್ಬರ ಫುಡ್ ಸ್ಟೈಲ್ ಭಿನ್ನವಾಗಿರುತ್ತದೆ. ಆದರೆ ಸಾಮಾನ್ಯವಾಗಿ ಊಟದಲ್ಲಿ ಅಥವಾ ಊಟದ ನಂತರ ಮೊಸರು ತಿನ್ನುವ ಕ್ರಮವನ್ನು ಎಲ್ಲರೂ ಅನುಸರಿಸುತ್ತಾರೆ. ಊಟದ ಕೊನೆಯಲ್ಲಿ ಯಾವ ಕಾರಣಕ್ಕೆ ಮೊಸರು ಸೇವಿಸುತ್ತಾರೆ ಎಂಬುದರ ಬಗ್ಗೆ ಆಸಕ್ತಿದಾಯಕ ವಿಚಾರಗಳು ಇಲ್ಲಿದೆ ನೋಡಿ.
ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಮೊಸರು ಪ್ರಧಾನ ಪಾತ್ರ ವಹಿಸುತ್ತದೆ. ಮಸಾಲೆಯುಕ್ತ ಆಹಾರ ಸೇವಿಸಿದರೆ ಉರಿ, ಆಮ್ಲೀಯತೆ ಸಮಸ್ಯೆ ಕಾಣಿಸಿಕೊಂಡರೆ ಮೊಸರು ಉಪಯುಕ್ತವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡಾ ಇದು ಸಹಾಯ ಮಾಡುತ್ತದೆ.
ಆದರೆ ಶೀತಲಕ್ಷಣಗಳು ಇರುವವರು ಮೊಸರನ್ನು ಮಿತಿಯಲ್ಲಿ ಸೇವಿಸುವುದು ಉತ್ತಮ. ಆಯುರ್ವೇದದ ಪ್ರಕಾರ ಮೊಸರು ದೇಹದಲ್ಲಿನ ಮೂರು ದೋಷಗಳಾದ ವಾತ, ಪಿತ್ತ, ಕಫವನ್ನು ಶಮನಗೊಳಿಸುತ್ತದೆ.

