ಮಂಗಳೂರು: ಕಾರೊಂದು ಡ್ರೈವರ್ ನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹೋಗಿ ಏರಿ ನಿಂತಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಬಚಾವಾದ ಘಟನೆ ಮಂಗಳೂರಿನ ಪಡೀಲ್ ಬಳಿಯ ಅಳಪೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪಡೀಲ್ ನಿಂದ ನಂತೂರಿನ ಕಡೆಗೆ ಚಲಿಸುತ್ತಿದ್ದ ಕಾರು ಅಳಪೆಯ ತಿರುವಿನಲ್ಲಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದೆ ಕಾರು ರಸ್ತೆಯ ವಿಭಜಕದ ಮೇಲೆ ಹೋಗಿ ನಿಂತಿದೆ. ಯಾವುದೇ ದುರಂತ ಸಂಭವಿಸದೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಕೇವಲ ಚಾಲಕ ಮಾತ್ರ ಇದ್ದು ನಂತೂರಿನ ರಸ್ತೆಯಿಂದ ಮಂಗಳೂರಿಗೆ ಬಂದಿದ್ದರು. ಆ ಸಂದರ್ಭ ಈ ಸಣ್ಣ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

