ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಿಕ್ಷಾ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಮತ್ತು ಹಿರಿಯ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹೇಶ್ ಆಸ್ಪತ್ರೆಯಿಂದ ರಸ್ತೆ ದಾಟುತ್ತಿದ್ದ ರಿಕ್ಷಾಗೆ ಲಾರಿ ಢಿಕ್ಕಿಹೊಡೆದಿದ್ದು ರಿಕ್ಷಾದಲ್ಲಿ 4 ಜನ ಪ್ರಯಾಣಿಸುತ್ತಿದ್ದರು.

ರಿಕ್ಷಾ ಪ್ರಯಾಣಿಕರಲ್ಲಿ ಮಹಿಳೆಯೊಬ್ಬರ ಕಾಲಿಗೆ ಗಾಯವಾಗಿದ್ದು, ಹಿರಿಯ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮೊನ್ನೆಯಷ್ಟೇ ಶಾಲಾ ಬಾಲಕನೊಬ್ಬ ಬಲಿಯಾಗಿದ್ದು , ನಿರಂತರವಾಗಿ ಅಪಘಾತ ನಡೆಯುತ್ತಲೇ ಇದೆ. ಮಹೇಶ್ ಆಸ್ಪತ್ರೆ ಜಂಕ್ಷನ್ ಮೃತ್ಯು ಕೂಪವಾಗಿದೆ .

ಬ್ರಹ್ಮಾವರದ ಜನತೆಯ ಹಲವು ವರ್ಷಗಳ ಬೇಡಿಕೆಯಾದ ಫ್ಲೈ ಓವರ್ ನಿರ್ಮಾಣವಾದರೆ ಅಪಘಾತಗಳು ಕಡಿಮೆಯಾಗಬಹುದು ಎಂಬ ಮಾತು ಸಾರ್ವಜನಿಕರ ಅಭಿಪ್ರಾಯ.




