ನೀಲಾವರ ಮಹತೋಭಾರ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಇಂದು ಮನ್ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಇಲ್ಲಿ ವರ್ಷಾವಧಿ ಮಹೋತ್ಸವವು ಎಪ್ರಿಲ್ ೧೧ರಂದು ಮೊದಲ್ಗೊಂಡು ಇದೇ ಎಪ್ರಿಲ್ ಹದಿನೆಂಟರವರೆಗೆ ಜರುಗಲಿದೆ.
ಇಂದು ನಡೆಯಲಿರುವ ಮನ್ಮಹಾರಥೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಜಗನ್ಮಾತೆಯ ಕೃಪೆಗೆ ಪಾತ್ರರಾಗುವಂತೆ ದೇಗುಲದ ಆಡಳಿತ ಸಮಿತಿ ವಿನಂತಿಸಿದೆ.
ಎಪ್ರಿಲ್ ಹದಿನೆಂಟರವರೆಗೆ ದೇಗುಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು ಇಂದು ನಡೆಯಲಿರುವ ಮನ್ಮಹಾರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ದೇಗುಲದ ಮಹಾ ಉತ್ಸವಕ್ಕೆ ಭಕ್ತರು ತನು ಮನ ಧನಗಳಿಂದ ಸಹಕರಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಆಡಳಿತ ಸಮಿತಿ ಮನವಿ ಮಾಡಿದೆ.

