ತುಮಕೂರು: ಜೀನೀ ಉತ್ಪನ್ನಗಳ ಬಗ್ಗೆ ನಾವೆಲ್ಲರೂ ಕೇಳಿರ್ತೇವೆ. ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳಿಗೆ ಅದರದ್ದೇ ಆದ ಬೇಡಿಕೆಯಿದೆ. ಇದೀಗ ಯರಗುಂಟೆಯಲ್ಲಿರುವ ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ಮೇಲೆ ಲೈಂಗಿಕ ಕಿರುಕುಳದ ಆರೋಪವೊಂದು ಕೇಳಿಬಂದಿದೆ.
ಮೇಘನಾ ಎಂಬ ಮಹಿಳೆ ಠಾಣೆಗೆ ದೂರು ನೀಡಿದ್ದು ಮಾಲೀಕ ದಿಲೀಪ್ ಕುಮಾರ್ ಅವರು ಆರು ತಿಂಗಳಿನಿಂದ ಈ ಆರೋಪವನ್ನು ಎದುರಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದು ಅಸಭ್ಯವಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡಿದ್ದು ಇದೀಗ ಎಫ್ಐಆರ್ ದಾಖಲಿಸದೆ ಕೇಸ್ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿ ಸಮರ್ಥನೆ ಮಾಡಿರುವ ದಿಲೀಪ್ ಕುಮಾರ್ ಅವರು ಮಹಿಳೆ ಸಂಸ್ಥೆಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ. ನಾನು ಯಾವುದೇ ರೀತಿಯ ಲೈಂಗಿಕ ಕಿರುಕುಳ ನೀಡಿಲ್ಲ. ಮಹಿಳೆ ಸರಿಯಾಗಿ ಕೆಲಸ ನಿರ್ವಹಿಸದ ಕಾರಣಕ್ಕೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

