ಉಡುಪಿ: ಪರ್ಕಳದ ಪ್ರಸಿದ್ಧ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಮಹಿಷಮರ್ಧಿನಿ ದೇಗುಲದ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಾಳೆಯಿಂದ ಆರಂಭಗೊಂಡು ಮೇ.೧೧ರವರೆಗೆ ನಡೆಯಲಿದೆ.
ಈ ಪ್ರಯುಕ್ತ ದೇಗುಲದಲ್ಲಿ ನಿರಂತರವಾಗಿ ಸುದರ್ಶನ ಹೋಮ, ಯಜ್ಞ-ಯಾಗಾದಿಗಳು ಇತ್ಯಾದಿ ವೈದಿಕ ವಿಧಿ ವಿಧಾನಗಳು ನಡೆಯಲಿದೆ. ಇನ್ನು ಇಲ್ಲಿ ನಡೆಯಲಿರುವ ಸುಧರ್ಮ ಸಭೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ.
ನಾಳೆ ಸಂಜೆ ನಡೆಯಲಿರುವ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ದೇವಸ್ಥಾನದ ಶ್ರೀನಿವಾಸ ತಂತ್ರಿ ಉಪಸ್ಥಿತಿಯಲ್ಲಿ ಹೆಚ್ ರಾಘವೇಂದ್ರ ತಂತ್ರಿ ಚಾಲನೆ ನೀಡಲಿದ್ದಾರೆ.

