ಮಂಗಳೂರು: ವ್ಯವಹಾರದ ವಿಚಾರದಲ್ಲಿ ಹಿಂದೂ ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದಾಗ ತಲ್ವಾರ್ ಹಿಡಿದು ಮನೆಗೆ ನುಗ್ಗಿ ಬೆದರಿಕೆ ಹಾಕಿದ ಆರೋಪದಲ್ಲಿ ವಿಹಿಂಪ ರಾಜ್ಯ ನಾಯಕ ಮುರಳಿಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಎಂಬವರ ಪತ್ನಿ ಶ್ರೀದೇವಿ ಹಾಗೂ ಮುರಳಿಕೃಷ್ಣ ಹಸಂತಡ್ಕ ಸಾರಡ್ಕದ ಪೆಟ್ರೋಲ್ ಪಂಪ್ ನ ಪಾಲುದಾರಿಕೆ ಹೊಂದಿದ್ದು ಅದನ್ನು ಬಿಟ್ಟುಕೊಡುವ ವಿಚಾರವಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಹರೀಶ್ ನೀಡಿದ ದೂರಿನ ಆಧಾರದಲ್ಲಿ ವಿಟ್ಲದ ಪೊಲೀಸರು ಹಸಂತಡ್ಕ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

