ಬೆಂಗಳೂರು: ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನಾ ಮಂಡಳಿ ನಡೆಸಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಮೇ. ಎರಡರಂದು ಅಂದರೆ ನಾಳೆ ಪ್ರಕಟವಾಗಲಿದೆ.
ರಾಜ್ಯಾದ್ಯಂತ ಸುಮಾರು ಎರಡು ಸಾವಿರದ ಎಂಟುನೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದ ಪರೀಕ್ಷೆಯನ್ನು ಸುಮಾರು ಎಂಟು ಲಕ್ಷಕ್ಕೂ ಅಧಿಕ ಮಂದಿ ಬರೆದಿದ್ದರು.
ನಾಳೆ ಬೆಳಿಗ್ಗೆ ೧೦.೩೦ರ ಸುಮಾರಿಗೆ ರಿಸಲ್ಟ್ ಬಿಡುಗಡೆ ಮಾಡುವುದಾಗಿ ಮಂಡಳಿ ನಿರ್ಧರಿಸಿದ್ದು ಈ ಹಿನ್ನೆಲೆ ಸುದ್ದಿಗೋಷ್ಠಿ ಕೂಡಾ ಕರೆಯಲಾಗಿದೆ. ವಿದ್ಯಾರ್ಥಿಗಳು ಅಫೀಶಿಯಲ್ ವೆಬ್ಸೈಟ್ ನಲ್ಲಿ ತಮ್ಮ ರಿಸಲ್ಟ್ ನೋಡಬಹುದಾಗಿದೆ .

