ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯ ನಂತರ ದೇಶದಲ್ಲಿ ಅನೇಕ ರೀತಿಯ ಬೆಳವಣಿಗೆಗಳು ಕಂಡುಬರುತ್ತಿದೆ. ಇದೀಗ ಪಾಕಿಸ್ತಾನ-ಭಾರತ ನಡುವೆ ಯುದ್ಧ ಬೇಕಾ ಬೇಡ್ವಾ ಅನ್ನುವ ಪ್ರಶ್ನೆ ಹುಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ರಮ್ಯಾ ಯುದ್ಧ ಬೇಡ, ಅದರಿಂದ ಯಾರೂ ಉದ್ಧಾರವಾಗಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ನಲ್ಲಿ ದಾಳಿ ಆಗಲು ಗುಪ್ತಚರ ವೈಫಲ್ಯ ಹಾಗೂ ನಮ್ಮ ಭದ್ರತಾ ಉಲ್ಲಂಘನೆಯೇ ಕಾರಣ. ಹೇಗೆ ಉಗ್ರರು ಒಳಗೆ ಬಂದ್ರು, ಹೀಗೆಲ್ಲಾ ಆಗಲು ಏನು ನ್ಯೂನತೆ ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕು. ಈಗ ಸರ್ಕಾರದವರು ಏನು ಆ್ಯಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ.
ಇನ್ನು ಯುದ್ಧದ ಬಗ್ಗೆ ಅಭಿಪ್ರಾಯ ಹಂಚಿಕೊಂಡು ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದ್ರಿಂದ ಯಾರು ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದ್ದರಿಂದ ನಮ್ಮ ಸೈನಿಕರೇ ಸಾಯೋದು. ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಎಂದು ಹೇಳಿದ್ದಾರೆ. ಇವರ ಪ್ರತಿಕ್ರಿಯೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


